Tuesday, December 2, 2025

ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್: ಹತ್ತು ದಿನದಲ್ಲಿ ಸಂಗ್ರಹವಾಗಿದ್ದೆಷ್ಟು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟ್ರಾಫಿಕ್ ಫೈನ್ ಪಾವತಿಗೆ 50% ರಿಯಾಯಿತಿ ಹಿನ್ನೆಲೆ ರಾಜ್ಯಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

10 ದಿನಗಳಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿದೆ. ಭಾನುವಾರದ ಅಂತ್ಯಕ್ಕೆ 8,01,12,350 ರೂ. ದಂಡ ಪಾವತಿಯಾಗಿದೆ. 2,82,793 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಇತ್ಯರ್ಥಗೊಂಡಿದೆ. 

ರಾಜ್ಯ ಸರ್ಕಾರ ಡಿಸೆಂಬರ್ 12ರವರೆಗೆ ದಂಡ ಪಾವತಿಗೆ 50 ಪರ್ಸೆಂಟ್ ರಿಯಾಯಿತಿ ನೀಡಿದೆ. 

error: Content is protected !!