ನಮ್ಮ ದೇಹವು ಸಣ್ಣ ಸಂಕೇತಗಳ ಮೂಲಕ ದೊಡ್ಡ ಆರೋಗ್ಯ ಮಾಹಿತಿಯನ್ನು ನಮಗೆ ತಿಳಿಸುತ್ತಿರುತ್ತದೆ. ಅದರಲ್ಲಿ ಮುಟ್ಟಿನ ರಕ್ತದ ಬಣ್ಣವೂ ಒಂದು ಪ್ರಮುಖ ಸುಳಿವು. ಬಹುತೆಕರು ಇದನ್ನು ಸಾಮಾನ್ಯವಾಗಿ ತಳ್ಳಿಹಾಕುತ್ತಾರೆ. ಆದರೆ ಮುಟ್ಟಿನ ಬಣ್ಣವು ನಿಮ್ಮ ಹಾರ್ಮೋನುಗಳ ಸಮತೋಲನ, ಗರ್ಭಾಶಯದ ಆರೋಗ್ಯ ಮತ್ತು ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಸೂಚಿಸಬಹುದು. ಆದ್ದರಿಂದ ಕೇವಲ ದಿನಾಂಕ ಮಾತ್ರವಲ್ಲ, ರಕ್ತದ ಬಣ್ಣಕ್ಕೂ ಗಮನ ಕೊಡಬೇಕು.
- ಗಾಢ ಕೆಂಪು ರಕ್ತ: ಇದು ಆರೋಗ್ಯಕರ ಮತ್ತು ನಿಯಮಿತ ರಕ್ತಸ್ರಾವದ ಸಂಕೇತ. ಸಮತೋಲಿತ ಹಾರ್ಮೋನುಗಳು ಮತ್ತು ಉತ್ತಮ ಅಂಡೋತ್ಪತ್ತಿಗೆ ಇದು ಉತ್ತಮ ಸೂಚನೆ.
- ಗಾಢ ಕೆಂಪು ಅಥವಾ ಕಂದು ರಕ್ತ: ಹಳೆಯ ರಕ್ತ ಹೊರಬರುವುದನ್ನು ಸೂಚಿಸುತ್ತದೆ. ನಿರಂತರವಾಗಿ ಕಂಡರೆ ಹಾರ್ಮೋನು ಅಸಮತೋಲನ ಅಥವಾ ಕಡಿಮೆ ಪ್ರೊಜೆಸ್ಟರಾನ್‌ನ ಸೂಚನೆಯಾಗಿರಬಹುದು.
- ಗುಲಾಬಿ ಬಣ್ಣದ ರಕ್ತ: ಕಡಿಮೆ ಈಸ್ಟ್ರೊಜೆನ್, ಪೋಷಕಾಂಶ ಕೊರತೆ ಅಥವಾ ಅತಿಯಾದ ವ್ಯಾಯಾಮದ ಪರಿಣಾಮವಾಗಿರಬಹುದು. ಕೆಲವೊಮ್ಮೆ ಅಂಡೋತ್ಪತ್ತಿಯ ಸಮಯದಲ್ಲೂ ಕಾಣಬಹುದು.
- ನೇರಳೆ ಅಥವಾ ನೀಲಿ ಛಾಯೆಯ ರಕ್ತ: ಇದು ತುಂಬಾ ಸಾಮಾನ್ಯವಲ್ಲ. ಹೆಚ್ಚು ದಪ್ಪ ರಕ್ತ, ಅಥವಾ ಹೆಪ್ಪುಗಟ್ಟುವಿಕೆಯ ರಚನೆ ಒಳಗೊಂಡಿರುತ್ತದೆ. ಎಂಡೊಮೆಟ್ರಿಯಮ್ ಮತ್ತು ಈಸ್ಟ್ರೊಜೆನ್ ಪ್ರಾಬಲ್ಯದಿಂದ ಉಂಟಾಗಬಹುದು.
- ಕಿತ್ತಳೆ ಅಥವಾ ಬೂದು ರಕ್ತ: ಇದು ಸಾಮಾನ್ಯವಲ್ಲ. ಸೋಂಕಿನ ಸೂಚನೆಯಾಗಿದ್ದು, ಫಲವತ್ತತೆಗೆ ತೊಂದರೆ ನೀಡಬಹುದು.
ಬಣ್ಣದ ಜೊತೆಗೆ ಚಕ್ರದ ಕ್ರಮಬದ್ಧತೆ, ಹರಿವಿನ ತೀವ್ರತೆ ಹಾಗೂ ಅವಧಿಯನ್ನೂ ಗಮನಿಸುವುದು ಅತ್ಯಂತ ಮುಖ್ಯ. ಏನಾದರೂ ಅಸಾಮಾನ್ಯವಾಗಿ ಕಂಡರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

