Tuesday, December 2, 2025

ನಾನು ಡಿಕೆ ಶಿವಕುಮಾರ್ ಬ್ರದರ್ಸ್, ನಮ್ಮ ಸಿದ್ದಾಂತ ಒಂದೇ: ಸಿಎಂ ಸಿದ್ದರಾಮಯ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಸದಾಶಿವ ನಗರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ನಡೆದ ಬ್ರೇಕ್ ಫಾಸ್ಟ್ ಮೀಟಿಂಗ್ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಬ್ರೇಕ್ ಫಾಸ್ಟ್ ವೇಳೆ ಪಕ್ಷದ ವಿಚಾರ ಚರ್ಚೆ ಮಾಡಿದ್ದೇವೆ.ಡಿಸೆಂಬರ್ 8 ರಿಂದ ಬೆಳಗಾವಿ ಅಧಿವೇಶನ ಆರಂಭ ಆಗುತ್ತದೆ. ಅಧಿವೇಶನ ಹಿನ್ನೆಲೆ ನಾವು ಚರ್ಚೆ ಮಾಡಿದ್ದೇವೆ. ವಿಪಕ್ಷಗಳ ಯಾವುದೇ ವಿಚಾರ ಪ್ರಸ್ತಾಪಿಸಿದ್ರೂ ಎದುರಿಸಿತ್ತೇವೆ ಎಂದು ಹೇಳಿದರು.

ಹೈಕಮಾಂಡ್ ಭೇಟಿಗೆ ಅವಕಾಶ ಸಿಕ್ಕರೆ ಭೇಟಿ ಮಾಡ್ತೇವೆ. ನಾನು ಡಿಕೆ ಶಿವಕುಮಾರ್ ಬ್ರದರ್ಸ್. ನಾನು ಡಿಕೆ ಶಿವಕುಮಾರ್ ಒಂದೇ ಪಕ್ಷ ಒಂದೇ ಸಿದ್ದಾಂತ ಹೊಂದಿದ್ದೆವೆ. ನಮ್ಮ ಸರ್ಕಾರ ಯಾವಾಗಲು ರೈತರ ಪರ ಇರುತ್ತದೆ ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಕಾರ್ಖಾನೆ ಮಾಲೀಕರ ಜತೆ ಚರ್ಚೆ ಮಾಡಲಾಗಿದೆ. ರಾಜ್ಯದ ಸಮಸ್ಯೆ ಬಗ್ಗೆಯೂ ನಾನು ಡಿಸಿಎಂ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಈ ಬಾರಿ ರೈತರು ಹೆಚ್ಚು ಮೆಕ್ಕೆಜೋಳ ಬೆಳೆದಿದ್ದಾರೆ ಎಂದು ತಿಳಿಸಿದರು.

error: Content is protected !!