January21, 2026
Wednesday, January 21, 2026
spot_img

ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್‌ನಿಂದ ತೆರಳಬೇಕಿದ್ದ 22 ವಿಮಾನಗಳ ಹಾರಾಟದಲ್ಲಿ ಭಾರೀ ವ್ಯತ್ಯಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. 22 ವಿಮಾನ ಹಾರಾಟ ಸ್ಥಗಿತಗೊಂಡ ಘಟನೆ ನಡೆದಿದೆ. ಪರಿಣಾಮ ಪ್ರಯಾಣಕರು ಪರದಾಡುವಂತಾಗಿದೆ.

ಏರ್ ಬಸ್ ವಿಮಾನಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಪ್ರಯಾಣಕ್ಕೆ ಅಡಚಣೆಯಾಗಿದೆ. ಇಷ್ಟೇ ಅಲ್ಲ 50ಕ್ಕೂ ಹೆಚ್ಚು ವಿಮಾನಗಳ ಹಾರಟ ಸಮಯ ಬದಲಾವಣೆಯಾಗಿದೆ.

ಬೆಂಗಳೂರಿನಿಂದ ದೇಶದ ವಿವಿಧಡೆ ತೆರಳಬೇಕಿದ್ದ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಏರ್ ಬಸ್‌ನ ಎ320 ವಿಮಾನಗಳಲ್ಲಿ ಸಾಫ್ಟ್ವೇರ್ ಹಾಗೂ ಹಾರ್ಡ್‌ವೇರ್ ಅಪ್‌ಗ್ರೇಡ್ ನಡೆಯುತ್ತಿದೆ. ತಾಂತ್ರಿಕ ಸಮಸ್ಯೆಗಳ ಕಾರಣ ಏರ್‌ಬಸ್ ವಿಮಾನ ಹಾರಾಟ ಸ್ಥಗಿತಗೊಂಡಿದೆ.ದೆಹಲಿ,ಮುಂಬೈ ,ಡೆಹ್ರಾಡೂನ್ , ಕೊಲ್ಕತ್ತಾ , ವಾರಣಾಸಿ , ಅಹಮದಾಬಾದ್ , ಪುಣೆ, ಚೆನ್ನೈ , ಸೇರಿದಂತೆ ಹಲವೆಡೆ ತೆರಳಬೇಕಿದ್ದ ವಿಮಾನಗಳಲ್ಲಿ ವಿಳಂಬವಾಗಿದೆ.

ಭಾರತದ ಹಲೆವೆಡೆ ಏರ್‌ಬಸ್ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ. ಏರ್‌ಬಸ್ ತಾಂತ್ರಿಕ ಅಪ್‌ಗ್ರಡೇಶನ್ ನಡೆಯುತ್ತಿರುವ ಕಾರಣ ದೇಶದ ಹಲವೆಡೆ ಏರ್‌ಬಸ್ ವಿಮಾನ ಸೇವೆಯಲ್ಲಿ ವ್ಯತ್ಯಯವಾಗಿದೆ.

Must Read