ಇತ್ತೀಚೆಗೆ ಟ್ರೆಂಡ್ ಆಗಿರುವ ಲೆಮನ್ ಪೆಪ್ಪರ್ ರೈಸ್ ಒಂದು ತುಂಬಾ ಸರಳವಾದರೂ ಸೂಪರ್ ಟೇಸ್ಟಿ ಡಿಶ್. ಕಡಿಮೆ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ಮಾಡುವ ಈ ರೈಸ್ ಬೆಳಗಿನ ಉಪಹಾರ, ಲಂಚ್ ಬಾಕ್ಸ್ ಅಥವಾ ಲೈಟ್ ಡಿನ್ನರ್‌ಗಾಗಿ ಪರ್ಫೆಕ್ಟ್.
ಬೇಕಾಗುವ ಪದಾರ್ಥಗಳು:
ಅನ್ನ – 2 ಕಪ್
ಬೆಣ್ಣೆ – 2 ಚಮಚ
ಬೆಳ್ಳುಳ್ಳಿ (ಸಣ್ಣ ಸಣ್ಣ ಕತ್ತರಿಸಿದ್ದು) – 1 ಚಮಚ
ಕಾಳುಮೆಣಸಿನ ಪುಡಿ – 1 ರಿಂದ 1½ ಚಮಚ
ನಿಂಬೆಹಣ್ಣಿನ ರಸ – 2 ಚಮಚ
ನಿಂಬೆ ತುರಿ (zest) – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ವಿಧಾನ:
ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಎಣ್ಣೆ ಮತ್ತು ಬೆಣ್ಣೆ ಹಾಕಿ. ಅದಕ್ಕೆ ಬೆಳ್ಳುಳ್ಳಿಯನ್ನು ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ನಂತರ ಅದಕ್ಕೆ ಕಾಳುಮೆಣಸಿನ ಪುಡಿ ಹಾಕಿ ಸ್ವಲ್ಪ ಫ್ರೈ ಮಾಡಿ. ಈಗ ಬೇಯಿಸಿದ ಅಕ್ಕಿಯನ್ನು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ಅನ್ನ ಹಾಕಿ ಜೊತೆಗೆ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ನಿಂಬೆಹಣ್ಣಿನ ರಸ ಹಾಗೂ ನಿಂಬೆ ತುರಿ ಹಾಕಿ ಮತ್ತೊಮ್ಮೆ ಮಿಶ್ರಣ ಮಾಡಿ. ಮೇಲೆ ಕೊತ್ತಂಬರಿ ಸೊಪ್ಪು ಹಾಕಿ.

