Wednesday, December 3, 2025

Sleeping Habits | ತುಂಬಾ ಚಳಿ ಅಂತ ಮುಖಕ್ಕೆ ಮುಸುಕು ಹಾಕಿ ಮಲ್ಕೊತೀರಾ? ಹಾಗಿದ್ರೆ ಈ ಸ್ಟೋರಿ ಓದ್ಲೇ ಬೇಕು ನೀವು!

ಚಳಿಗಾಲದ ಮಲಗೋವಾಗ ನಾವು ಸಹಜವಾಗಿ ಮುಸುಕು ತಲೆಯವರೆಗೂ ಎಳೆದುಕೊಳ್ಳುತ್ತೇವೆ. ಬೇರೇನೂ ಸಮಸ್ಯೆಯಿಲ್ಲ ಅನ್ನಿಸಬಹುದು. ಆದರೆ ಇದೇ ಅಭ್ಯಾಸ ಪ್ರತಿದಿನ ಮುಂದುವರಿದರೆ ಆರೋಗ್ಯದ ಮೇಲೆ ನಿಧಾನವಾಗಿ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಬಹುತೇಕ ಜನ ಗಮನಿಸುವುದಿಲ್ಲ. ಮುಸುಕು ಹಾಕಿಕೊಂಡು ಮಲಗುವ ಅಭ್ಯಾಸ ಸಣ್ಣದಾಗಿರಬಹುದು, ಆದರೆ ಅದರ ಪರಿಣಾಮಗಳು ದೊಡ್ಡದಾಗಿವೇ.

  • ಉಸಿರಾಟಕ್ಕೆ ತೊಂದರೆ: ಮುಸುಕು ಮುಖದ ಮೇಲೆ ಬಂದಾಗ ನಾವು ಹೊರಬಿಡುವ ಕಾರ್ಬನ್ ಡೈಆಕ್ಸೈಡ್ ಮತ್ತೆ ಒಳಗೆ ಸೇರುವುದರಿಂದ ಶುದ್ಧ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಉಸಿರುಗಟ್ಟುವ ಭಾವನೆ ಉಂಟಾಗಬಹುದು.
  • ತಲೆನೋವು ಮತ್ತು ದಣಿವು: ರಾತ್ರಿ ಶುದ್ಧ ಗಾಳಿ ಕಡಿಮೆಯಾಗುವುದರಿಂದ ಬೆಳಗ್ಗೆ ಎದ್ದಾಗ ತಲೆನೋವು, ತಲೆಸುತ್ತು ಮತ್ತು ದಣಿವಿನ ಅನುಭವ ಹೆಚ್ಚಾಗುತ್ತದೆ.
  • ಚರ್ಮದ ಸಮಸ್ಯೆಗಳು: ತೇವ, ಉಸಿರಿನ ಬಿಸಿ ಮತ್ತು ಸ್ವಚ್ಚತೆ ಕೊರತೆಯಿಂದ ಮುಖದ ಮೇಲೆ ಪಿಂಪಲ್, ಅಲರ್ಜಿಗಳು ಹೆಚ್ಚಾಗಬಹುದು.
  • ಕೆಮ್ಮು ಹೆಚ್ಚಾಗುವ ಸಾಧ್ಯತೆ: ಚಳಿ ಹಾಗೂ ತೇವ ಒಟ್ಟುಗೂಡಿದ ವಾತಾವರಣ ಮೂಗಿನ ಒಳಭಾಗಕ್ಕೆ ತೊಂದರೆಯಾಗಿ ಶೀತ, ಕೆಮ್ಮು ಬರುವ ಸಾಧ್ಯತೆ ಇರುತ್ತದೆ.
  • ಉತ್ತಮ ನಿದ್ರೆಗೆ ಅಡ್ಡಿ: ಉಸಿರಾಟ ಸರಾಗವಾಗದೆ ಇದ್ದರೆ ನಿದ್ರೆಯ ಗುಣಮಟ್ಟ ಕೆಡುವುದು, ಮಧ್ಯಮಧ್ಯೆ ಎಚ್ಚರವಾಗುವುದು ಸಾಮಾನ್ಯ.

ಉಪಾಯವೇನು?
ಮುಖವನ್ನು ಮುಚ್ಚದೇ ಕುತ್ತಿಗೆವರೆಗೂ ಮಾತ್ರ ಹಾಕಿ ಮಲಗುವುದು ಉತ್ತಮ. ಕೊಠಡಿಯಲ್ಲಿ ಸ್ವಲ್ಪ ಗಾಳಿ ಹರಿದಾಡುವಂತೆ ಕಿಟಕಿ ಚಿಕ್ಕದಾಗಿ ತೆರೆದಿಡಬಹುದು. ಚಳಿ ತಡೆಯಲು ಸೂಕ್ತ ಬಿಸಿ ಬಟ್ಟೆಗಳನ್ನು ಧರಿಸುವುದರಿಂದ ಮುಸುಕು ಮುಖದ ಮೇಲೆ ಎಳೆದುಕೊಳ್ಳುವ ಅಗತ್ಯವೇ ಬರುವುದಿಲ್ಲ.

error: Content is protected !!