ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾದ ಸರ್ಕಾರದ ಸಂಚಾರ್ ಸಾಥಿ ಅಪ್ಲಿಕೇಶನ್ ಬಳಕೆಯನ್ನು ಕಡ್ಡಾಯಗೊಳಿಸಿದ ಸರ್ಕಾರದ ಆದೇಶದ ಬೆನ್ನಲ್ಲೇ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈ ವಿವಾದದ ನಡುವೆಯೂ ಅಪ್ಲಿಕೇಷನ್ ಡೌನಲೋಡ್‌ಗಳು ಹೆಚ್ಚಾಗಿದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ.
ದೂರಸಂಪರ್ಕ ಇಲಾಖೆಯ ಮೂಲಗಳ ಪ್ರಕಾರ, ಮಂಗಳವಾರ ಸುಮಾರು 6,00,000 ಜನರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದಾರೆ. ಇದು ಸಾಮಾನ್ಯ ದಿನದಲ್ಲಿ ಸುಮಾರು 60,000 ಆಗಿತ್ತು. ಅಂದರೆ ಒಂದೇ ದಿನದಲ್ಲಿ ಡೌನ್‌ಲೋಡ್‌ಗಳು ಹತ್ತು ಪಟ್ಟು ಹೆಚ್ಚಾಗಿದೆ.
ಸರ್ಕಾರ ಆದೇಶ ಹೊರಡಿಸುವ ಮೊದಲೇ 15 ಮಿಲಿಯನ್ ಜನರು ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ನವೆಂಬರ್ 28ರಂದು ಹೊರಡಿಸಲಾದ ಆದೇಶವು ಎಲ್ಲಾ ಮೊಬೈಲ್ ಕಂಪನಿಗಳು ಹೊಸ ಮತ್ತು ಹಳೆಯ ಎರಡೂ ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಮೊದಲೇ ಸ್ಥಾಪಿಸುವಂತೆ ನಿರ್ದೇಶಿಸಿದೆ. ಆದರೆ ಈ ಅಪ್ಲಿಕೇಶನ್ ಕಡ್ಡಾಯವಲ್ಲ. ಬೇಡವಾದಲ್ಲಿ ಈ ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಬಹುದು ಎಂದು ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ.
ವಿವಾದದ ನಡುವೆಯೇ ಹತ್ತುಪಟ್ಟು ಹೆಚ್ಚಾಯ್ತು ಸಂಚಾರ್ ಸಾಥಿ ಆ್ಯಪ್ ಡೌನ್‌ಲೋಡ್ಸ್

