Wednesday, December 3, 2025

Guava | ಈ ಸಮಸ್ಯೆ ಇರೋರು ಪೇರಳೆ ಹಣ್ಣು ತಿನ್ನೋಕೆ ಹೋಗ್ಬೇಡಿ! ಆಸ್ಪತ್ರೆ ಸೇರಬೇಕಾದೀತು ಹುಷಾರ್!

ಮನೆಯ ಅಂಗಳದಲ್ಲಿ ಕೈಗೆ ಸಿಗುವ ಮೊದಲ ಹಣ್ಣು ಎಂದರೆ ಸೀಬೆಹಣ್ಣು ಅಥವಾ ಪೇರಳೆಹಣ್ಣು. ಕಡಿಮೆ ಬೆಲೆ, ಸಿಹಿ-ಹುಳಿ ರುಚಿ, ಹೆಚ್ಚು ಪೋಷಕಾಂಶಗಳ ಕಾರಣ ಇದನ್ನು ಬಡವರ ಸೇಬು ಎಂದೇ ಕರೆಯುತ್ತಾರೆ. ಆದರೆ ಇಷ್ಟೇ ಆರೋಗ್ಯಕರವೆಂದು ಎಲ್ಲರೂ ಅತಿಯಾಗಿ ತಿಂದರೆ, ಕೆಲವರಿಗೆ ಇದೇ ಸೀಬೆಹಣ್ಣು ಸಮಸ್ಯೆಯ ಮೂಲವಾಗಬಹುದು ಅನ್ನೋದು ಹಲವರಿಗೆ ಗೊತ್ತೇ ಇಲ್ಲ. ಆರೋಗ್ಯ ಕೊಡಬಲ್ಲ ಹಣ್ಣು, ಎಚ್ಚರಿಕೆ ಇಲ್ಲದೆ ಸೇವಿಸಿದರೆ ತೊಂದರೆಯನ್ನೂ ಕೊಡಬಹುದು.

  • ಪೋಷಕಾಂಶಗಳ ಶಕ್ತಿ: ಸೀಬೆಹಣ್ಣಿನಲ್ಲಿ ವಿಟಮಿನ್ C ಬಹಳ ಪ್ರಮಾಣದಲ್ಲಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ A ಕಣ್ಣಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪೊಟ್ಯಾಸಿಯಂ ರಕ್ತದೊತ್ತಡ ನಿಯಂತ್ರಣಕ್ಕೆ ಉಪಕಾರಿ.
  • ಕಿಡ್ನಿ ಸಮಸ್ಯೆಯವರಿಗೆ ಅಪಾಯ: ಸೀಬೆಹಣ್ಣಿನಲ್ಲಿ ಪೊಟ್ಯಾಸಿಯಂ ಹೆಚ್ಚಿರುವ ಕಾರಣ ಕಿಡ್ನಿ ಸಮಸ್ಯೆ ಇರುವವರು ಇದನ್ನು ಹೆಚ್ಚಾಗಿ ಸೇವಿಸಿದರೆ ಹಾನಿಯ ಸಾಧ್ಯತೆ ಇರುತ್ತದೆ.
  • ಜೀರ್ಣಕ್ರಿಯೆಯ ತೊಂದರೆ: ಪೇರಲ ಹಣ್ಣುಗಳಲ್ಲಿ ಫ್ರಕ್ಟೋಸ್ ಮತ್ತು ವಿಟಮಿನ್ ಸಿ ಫೈಬರ್ ಅತಿಯಾಗಿ ಇದ್ದು ಸೇವಿಸಿದರೆ ಗ್ಯಾಸು, ಅಸಿಡಿಟಿ, ಹೊಟ್ಟೆ ಉಬ್ಬರ ಉಂಟಾಗಬಹುದು. ರಾತ್ರಿ ಹೊತ್ತು ತಿನ್ನುವುದು ಇನ್ನೂ ತೊಂದರೆ ಕೊಡಬಹುದು.
  • ಶೀತ–ಕೆಮ್ಮು ಇರುವ ಸಮಯ: ಸೀಬೆಹಣ್ಣು ಶೀತಗೊಳಿಸುವ ಗುಣ ಹೊಂದಿದೆ. ಹೀಗಾಗಿ ಜ್ವರ, ಶೀತ, ಕೆಮ್ಮು ಇರುವವರು ಈ ಸಮಯದಲ್ಲಿ ತಿನ್ನುವುದನ್ನು ತಪ್ಪಿಸಿದರೆ ಒಳಿತು.
  • ಮಧುಮೇಹ ಮತ್ತು ಚರ್ಮದ ಸಮಸ್ಯೆ: ಮಧುಮೇಹಿಗಳಿಗೆ ಮಿತ ಪ್ರಮಾಣವೇ ಸೂಕ್ತ. ಕೆಲವರಿಗೆ ಇದರಿಂದ ಚರ್ಮದ ಅಲರ್ಜಿ, ಉರಿ ಕೂಡ ಕಾಣಿಸಿಕೊಳ್ಳಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)
error: Content is protected !!