Wednesday, December 3, 2025

ಹರಿದ್ವಾರದ ಗಂಗಾತೀರದಲ್ಲಿ ಧರ್ಮೇಂದ್ರಗೆ ಅಂತಿಮ ವಿದಾಯ: ಚಿತಾಭಸ್ಮ ವಿಸರ್ಜಿಸಿದ ಪುತ್ರರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಒಂದು ಯುಗದ ಪ್ರತೀಕವಾಗಿ ಗುರುತಿಸಿಕೊಂಡಿದ್ದ ಹಿರಿಯ ನಟ ಧರ್ಮೇಂದ್ರ ಅವರ ಅಂತಿಮ ಸಂಸ್ಕಾರದ ಬಳಿಕ ಅವರ ಕುಟುಂಬವು ಅತ್ಯಂತ ಸರಳತೆ ಮತ್ತು ಗೌಪ್ಯತೆಯಲ್ಲಿ ಚಿತಾಭಸ್ಮ ವಿಸರ್ಜನೆ ನೆರವೇರಿಸಿದೆ.

ನವೆಂಬರ್ 24ರಂದು ವಿಧಿವಶರಾದ ಧರ್ಮೇಂದ್ರ ಅವರ ಚಿತಾಭಸ್ಮವನ್ನು ಅವರ ಇಚ್ಛೆಯಂತೆ ಗಂಗಾನದಿಯಲ್ಲಿ ವಿಲೀನಗೊಳಿಸುವ ಮೂಲಕ ಕುಟುಂಬವು ಭಾವಪೂರ್ಣ ಅಂತಿಮ ವಿದಾಯ ಸಲ್ಲಿಸಿದೆ. ಬುಧವಾರ ಬೆಳಿಗ್ಗೆ ಕುಟುಂಬ ಸದಸ್ಯರು ಉತ್ತರಾಖಂಡದ ಪವಿತ್ರ ನಗರ ಹರಿದ್ವಾರಕ್ಕೆ ಆಗಮಿಸಿದ್ದು, ಬೆಳಿಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಗಂಗಾತೀರದ ಘಾಟ್‌ನಲ್ಲಿ ವೈದಿಕ ವಿಧಿಗಳ ಪ್ರಕಾರ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಅವರ ಪುತ್ರರಾದ ನಟ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಕುಟುಂಬದವರೊಂದಿಗೆ ಉಪಸ್ಥಿತರಿದ್ದರು.

ಮಾಧ್ಯಮಗಳೆಲ್ಲಿಂದ ದೂರವಿರಿಸಿ, ಈ ವಿಧಿವಿಧಾನವನ್ನು ಸಂಪೂರ್ಣ ಖಾಸಗಿ ರೀತಿಯಲ್ಲಿ ನಡೆಸಬೇಕೆಂಬುದೇ ಕುಟುಂಬದ ಆಶಯವಾಗಿದ್ದು, ಅದಕ್ಕಾಗಿ ಘಾಟ್ ಸುತ್ತಲೂ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.

error: Content is protected !!