Thursday, December 4, 2025

ಗಾಯಕ್ವಾಡ್, ಕೊಹ್ಲಿ ಭರ್ಜರಿ ಶತಕ: ಆಫ್ರಿಕಾ ಗೆಲುವಿಗೆ ಬಿಗ್ ಟಾರ್ಗೆಟ್ ನೀಡಿದ ಭಾರತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 5 ವಿಕೆಟ್‌ಗೆ 358 ರನ್ ಪೇರಿಸಿದೆ. ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಭಾರತೀಯ ತಂಡದ ಪರ ಶತಕ ಗಳಿಸಿದರೆ, ನಾಯಕ ಕೆಎಲ್ ರಾಹುಲ್ ಅರ್ಧಶತಕ ಗಳಿಸಿದರು.

ರಾಯ್‌ಪುರದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ಭಾರತ ತಂಡದ ಪರವಾಗಿ ಇನ್ನಿಂಗ್ಸ್ ಆರಂಭಿಸಿದರು. ಆದಾಗ್ಯೂ, ಈ ಪಂದ್ಯದಲ್ಲಿ ರೋಹಿತ್ ದೊಡ್ಡ ಇನ್ನಿಂಗ್ಸ್ ಗಳಿಸುವಲ್ಲಿ ವಿಫಲರಾದರು. ರೋಹಿತ್ ಶರ್ಮಾ 8 ಎಸೆತಗಳಲ್ಲಿ ಕೇವಲ 14 ರನ್ ಗಳಿಸಿದರು. ನಂತರ ಯಶಸ್ವಿ ಜೈಸ್ವಾಲ್ 38 ಎಸೆತಗಳಲ್ಲಿ 22 ರನ್ ಗಳಿಸಿ ನಿರ್ಗಮಿಸಿದರು.

ವಿರಾಟ್ ಕೊಹ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 100 ರನ್ ಗಳಿಸಿದರು. ಅಂತಿಮವಾಗಿ ಕೊಹ್ಲಿ 93 ಎಸೆತಗಳಲ್ಲಿ 102 ರನ್ ಬಾರಿಸಿ ಔಟಾದರು.

ಇದಕ್ಕೂ ಮೊದಲು, ರುತುರಾಜ್ ಗಾಯಕವಾಡ್ ಕೂಡ ಶತಕ ಗಳಿಸಿದರು. ಗೈಕ್‌ವಾಡ್ 77 ಎಸೆತಗಳಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಗಳಿಸಿದರು. ಕೊಹ್ಲಿ, ರುತುರಾಜ್ ಗಾಯಕ್ವಾಡ್ ಜೊತೆ ಮೂರನೇ ವಿಕೆಟ್‌ಗೆ 156 ಎಸೆತಗಳಲ್ಲಿ 195 ರನ್‌ಗಳ ಜೊತೆಯಾಟ ನೀಡಿದರು. ಇನ್ನು ನಾಯಕ ಕೆಎಲ್ ರಾಹುಲ್ ಅಜೇಯ 66 ರನ್ ಪೇರಿಸಿದ್ದರೆ ರವೀಂದ್ರ ಜಡೇಜಾ ಅಜೇಯ 24 ರನ್ ಪೇರಿಸಿದರು.

ಆಫ್ರಿಕಾ ಮಾರ್ಕೋ ಜೇಸನ್ 2, ಎನ್‌ಗಿಡಿ ಮತ್ತು ನಾಂಡ್ರೆ ಬರ್ಗರ್ ತಲಾ 1 ವಿಕೆಟ್ ಪಡೆದಿದ್ದಾರೆ.

error: Content is protected !!