ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣವೀರ್ ಸಿಂಗ್ ‘ದೈವವನ್ನು ದೆವ್ವ’ ಎಂದು ಕರೆದಿದ್ದರು. ದೈವವನ್ನು ಅನುಕರಿಸಲು ಹೋಗಿ ಟೀಕೆಗೆ ಗುರಿಯಾಗಿದ್ದರು. ಈಗ ಬೆಂಗಳೂರಿನಲ್ಲೂ ಅವರ ಮೇಲೆ ದೂರು ನೀಡಲಾಗಿದೆ. ಧುರಂಧರ್ ಸಿನಿಮಾ ರಿಲೀಸ್‌ಗೂ ಮೊದಲೇ ಅವರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.
ಇತ್ತಿಚೇಗೆ ಗೋವಾದಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆದಿದೆ. ಈ ವೇಳೆ ರಣವೀರ್ ಸಿಂಗ್ ಅವರು ದೈವದ ಅವಹೇಳನ ಮಾಡಿದ್ದಾರೆ. ಉಳ್ಳಾಳ್ತಿ ದೈವವನ್ನು ‘ಫೀಮೇಲ್ ಗೋಸ್ಟ್ ’ ಅಂದರೆ ‘ಹೆಣ್ಣು ದೆವ್ವ’ ಎಂದು ಸಂಬೋಧಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರು ಕ್ಷಮೆ ಕೂಡ ಕೇಳಿದ್ದಾರೆ. ಆದಾಗ್ಯೂ ಅವರ ವಿರುದ್ಧ ದೂರು ದಾಖಲಾಗಿದೆ. ಕ್ಷಮೆ ಒಪ್ಪಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬಂದಿದೆ.
ಈ ಹೇಳಿಕೆ ಸಂಬಂಧ ವಕೀಲ ಪ್ರಶಾಂತ್ ಮೇತಲ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಂತೆ ಪ್ರಶಾಂತ್ ಆಗ್ರಹಿಸಿದ್ದಾರೆ.
‘ರಣವೀರ್ ಸದ್ಯ ಕ್ಷಮೇ ಕೇಳಿದ್ದಾರೆ. ಆದರೆ, ಅದನ್ನ ಒಪ್ಪಲು ಸಾಧ್ಯವಿಲ್ಲ. ರಣವೀರ್ ದಂಡನಾರ್ಹ ಅಪರಾಧ ಮಾಡಿದ್ದು ಅವರಿಗೆ ಕಾನೂನು ರೀತಿ ಶಿಕ್ಷೆ ಆಗಬೇಕು’ ಎಂಬುದು ಪ್ರಶಾಂತ್ ಅವರ ವಾದವಾಗಿದೆ.

