ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಕೀಯ ಶಿಷ್ಟಾಚಾರ ಮತ್ತು ಅಧಿಕೃತ ಕಾರ್ಯಕ್ರಮಗಳ ಮಧ್ಯೆಯಲ್ಲೂ ಕೆಲವೊಮ್ಮೆ ಹೃದಯಸ್ಪರ್ಶಿ ಕ್ಷಣಗಳು ಮೂಡಿ ಬರುತ್ತವೆ. ಸಂಸತ್ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಂಥದ್ದೇ ಒಂದು ಮನೋಜ್ಞ ದೃಶ್ಯ ಕಂಡುಬಂದಿತು. ಕಾರ್ಯಕ್ರಮಕ್ಕಾಗಿ ಗಣ್ಯರು ಕುಳಿತಿದ್ದ ವೇಳೆ, ಭುಜದ ನೋವಿನಿಂದ ಬಳಲುತ್ತಿದ್ದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಆಸನದಲ್ಲೇ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಅವರಿಗೆ ಆರಾಮ ಸಿಗಲಿ ಎಂಬ ಉದ್ದೇಶದಿಂದ ಅಲ್ಲಿಗೆ ಬಂದ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಹಿಂತಿರುಗಿ ನಿಂತು ನಿಧಾನವಾಗಿ ಅವರ ಭುಜಗಳನ್ನು ಒತ್ತಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ವಯನಾಡಿನ ಸಂಸದೆ ಪ್ರಿಯಾಂಕಾ ಗಾಂಧಿ ಈ ದೃಶ್ಯವನ್ನು ನೋಡಿ ನಸುನಗುತ್ತಾ ಮಸಾಜ್‌ನಿಂದಾಗುವ ಲಾಭಗಳ ಬಗ್ಗೆ ಖರ್ಗೆಯವರೊಂದಿಗೆ ಸೌಮ್ಯವಾಗಿ ಮಾತನಾಡಿದರು. ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಗೊಂಡ ಈ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ.

