ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಪೊಲೀಸರ ಕರ್ತವ್ಯಲೋಪ, ಅಕ್ರಮ ಚಟುವಟಿಕೆಗಳು ಹೆಚ್ಚಾಗ್ತಿದ್ದಂತೆ ಹಿರಿಯ ಅಧಿಕಾರಿಗಳು ಅದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡ್ತಿದ್ದಾರೆ. ಸಿಎಂ ಕಾವೇರಿ ನಿವಾಸದ ಬಂದೋಬಸ್ತ್‌ಗೆ ಬಾರದ ನಾಲ್ವರು ಪೊಲೀಸರು ಸಸ್ಪೆಂಡ್ ಮಾಡಲಾಗಿದೆ.
ಸಂಜಯನಗರ, ಸುಬ್ರಹ್ಮಣ್ಯ ನಗರ, ನಂದಿನಿ ಲೇಔಟ್ ಠಾಣೆ ಸಿಬ್ಬಂದಿಯನ್ನ ಅಮಾನತುಗೊಳಿಸಿ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಆದೇಶ ಹೊರಡಿಸಿದ್ದಾರೆ. ASI ಶ್ರೀನಿವಾಸ್ ಮೂರ್ತಿ(ನಂದಿನಿ ಲೇಔಟ್ ಠಾಣೆ), ASI ಜಯರಾಮೇಗೌಡ, ಹೆಡ್ ಕಾನ್ಸ್‌ಟೆಬಲ್ ಧರ್ಮ (ಸುಬ್ರಹ್ಮಣ್ಯ ನಗರ ಠಾಣೆ), ಕಾನ್ಸ್‌ಟೆಬಲ್ ನಜೀರ್ (ಸಂಜಯನಗರ ಠಾಣೆ) ಅಮಾನತ್ತಾದ ಸಿಬ್ಬಂದಿ.
ಸಿಎಂ ಕಾವೇರಿ ನಿವಾಸದ ಬಂದೋಬಸ್ತ್‌ಗೆ ಬಾರದೇ ಕೈಕೊಟ್ಟಿದ್ದ ಕಾನ್‌ಸ್ಟೇಬಲ್ ಸಹ ಅಮಾನತಾಗಿದ್ದಾರೆ. ಸಂಜಯನಗರ ಠಾಣೆ PC ನಜೀರ್‌ನ ನ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿತ್ತು. ಸಿಎಂ ಮನೆಗೆ ಬಂದೋಬಸ್ತ್‌ಗೆ ನಿಯೋಜನೆ ಮಾಡಿದ್ರೂ ಗೈರಾಗಿ ನಿರ್ಲಕ್ಷ್ಯ ತೋರಿದ್ರು. ಕರ್ತವ್ಯ ಲೋಪ ಎಸಗಿದ್ದ ಸಿಬ್ಬಂದಿ ನಜೀರ್‌ನನ್ನ ಅಮಾನತ್ತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಬೆಂಗಳೂರು ನಗರದಲ್ಲಿ ಕಳೆದ 15 ದಿನಗಳಿಂದ 33ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಅಮಾನತಾಗಿದ್ದಾರೆ.
ಸಿಎಂ ಕಾವೇರಿ ನಿವಾಸದ ಬಂದೋಬಸ್ತ್‌ಗೆ ಬಾರದ ನಾಲ್ವರು ಪೊಲೀಸರು ಸಸ್ಪೆಂಡ್

