ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಅಜ್ಜ–ಅಜ್ಜಿಯರ ಕಾಲದಿಂದಲೂ ಕಡಲೆಹಿಟ್ಟು ಸ್ನಾನ, ಮುಖದ ಆರೈಕೆಗೆ ಬಳಸಲ್ಪಡುತ್ತಿದ್ದ ನೈಸರ್ಗಿಕ ಕಾಸ್ಮೆಟಿಕ್. ಇಂದಿಗೂ ಅನೇಕರು ಸೋಪ್ ಬಿಟ್ಟು ಕಡಲೆಹಿಟ್ಟನ್ನೇ ಮುಖ ತೊಳೆಯಲು ಬಳಸುತ್ತಾರೆ. ಇತ್ತೀಚೆಗೆ ಕಡಲೆಹಿಟ್ಟಿಗೆ ತುಪ್ಪ ಬೆರೆಸಿ ಫೇಸ್ ಪ್ಯಾಕ್ ಹಚ್ಚುವುದು ಟ್ರೆಂಡ್ ಆಗುತ್ತಿದೆ. ಆದರೆ ಇದು ಎಲ್ಲರಿಗೂ ಸುರಕ್ಷಿತವೇ? ಇದರಿಂದ ನಿಜಕ್ಕೂ ಚರ್ಮಕ್ಕೆ ಪ್ರಯೋಜನವಾಗುತ್ತದೆಯೇ? ತಿಳಿಯೋಣ.
ತುಪ್ಪ–ಕಡಲೆಹಿಟ್ಟಿನ ಲಾಭಗಳು:
ತುಪ್ಪ ಚರ್ಮವನ್ನು ಆಳವಾಗಿ ತೇವಗೊಳಿಸುವ ಕೊಬ್ಬಿನಾಮ್ಲಗಳನ್ನು ಹೊಂದಿದೆ. ಕಡಲೆಹಿಟ್ಟು ಸತ್ತ ಚರ್ಮದ ಕೋಶಗಳನ್ನು ತೆಗೆಯುವ ನೈಸರ್ಗಿಕ ಎಕ್ಸ್‌ಫೋಲಿಯೇಟರ್. ಈ ಎರಡು ಸೇರಿ ಚರ್ಮದ ಕಾಂತಿ ಹೆಚ್ಚಿಸುತ್ತವೆ, ಎಣ್ಣೆ ನಿಯಂತ್ರಿಸುತ್ತವೆ ಮತ್ತು ಚರ್ಮದ ಟೋನ್ ಸಮವಾಗಲು ಸಹಾಯ ಮಾಡುತ್ತವೆ.
ಯಾರು ಬಳಸಬಹುದು:
ಸಾಮಾನ್ಯ ಅಥವಾ ಮಂದ ಚರ್ಮ ಹೊಂದಿರುವವರು ವಾರಕ್ಕೆ ಎರಡು ಬಾರಿ ಈ ಫೇಸ್ ಪ್ಯಾಕ್ ಬಳಸಬಹುದು. ಇದು ಚರ್ಮವನ್ನು ಪೋಷಿಸಿ ಮೃದುವಾಗಿಸುತ್ತದೆ.
ಯಾರು ಬಳಸಬಾರದು:
ಡೈರಿ ಉತ್ಪನ್ನಗಳಿಗೆ ಅಲರ್ಜಿ ಇರುವವರು, ಅತಿ ಒಣ ಚರ್ಮ ಹೊಂದಿರುವವರು, ಎಸ್ಜಿಮಾ, ಸೋರಿಯಾಸಿಸ್, ಸೆಬೊರ್ಹೆಕ್ ಡರ್ಮಟೈಟಿಸ್ ಇರುವವರು ಇದನ್ನು ತಪ್ಪಿಸಬೇಕು. ಮೊಡವೆ ಸಮಸ್ಯೆ ಇರುವವರಿಗೆ ತುಪ್ಪ ರಂಧ್ರಗಳನ್ನು ಮುಚ್ಚಿ ಸಮಸ್ಯೆಯನ್ನು ಹೆಚ್ಚಿಸಬಹುದು.
ಅಲರ್ಜಿ ಪರೀಕ್ಷೆ ಅನಿವಾರ್ಯ:
ಮೊದಲ ಬಾರಿಗೆ ಬಳಸುವಾಗ ಕೈಮಣೆ ಬಳಿ ಪ್ಯಾಚ್ ಟೆಸ್ಟ್ ಮಾಡುವುದು ಅತ್ಯಂತ ಮುಖ್ಯ.
ಬಳಸುವ ಸರಿಯಾದ ವಿಧಾನ:
ಮುಖ ಸ್ವಚ್ಛಗೊಳಿಸಿದ ನಂತರ ಸ್ವಲ್ಪ ತುಪ್ಪ–ಕಡಲೆಹಿಟ್ಟನ್ನು ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 10–15 ನಿಮಿಷಗಳ ಬಳಿಕ ತಣ್ಣೀರು ಅಥವಾ ಸಾಮಾನ್ಯ ನೀರಿನಿಂದ ತೊಳೆಯಿರಿ.

