Thursday, December 4, 2025

ಪ್ರೀತಿ ದುಬಾರಿ! ಲಿವ್‌ ಇನ್‌ ಗೆಳತಿ ಖರ್ಚು ನಿಭಾಯಿಸಲು ಕಳ್ಳತನಕ್ಕಿಳಿದಿದ್ದ ರೋಮಿಯೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತನ್ನ ಲಿವ್‌ ಇನ್‌ ಗೆಳತಿ ಆಸೆ ಪೂರೈಸಲು, ಖರ್ಚು ನಿಭಾಯಿಸಲು ಕಳ್ಳತನಕ್ಕಿಳಿದಿದ್ದ ವ್ಯಕ್ತಿಯೊಬ್ಬನನ್ನ ಕಲಬುರಗಿ ವಿವಿ ಪೊಲೀಸರು ಬಂಧಿಸಿದ್ದಾರೆ. ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ (24) ಬಂಧಿತ ಆರೋಪಿ, ಕಲ್ಲಪ್ಪನಿಗೆ ಸಹಾಯ ಮಾಡ್ತಿದ್ದ ಸಂತೋಷ್‌ ಎಂಬಾತನನ್ನೂ ಸಹ ಪೊಲೀಸರು ಬಂಧಿಸಿದ್ದಾರೆ.

ಕಲ್ಲಪ್ಪ ಅಫಜಲಪುರ ತಾಲೂಕಿನ ಗೌರ್ (ಬಿ) ಗ್ರಾಮದ ನಿವಾಸಿ. ಆರಂಭದಲ್ಲಿ 3 ಗ್ರಾಂ ಚಿನ್ನ ದರೋಡೆ ಪ್ರಕರಣ ಭೇದಿಸಲು ಹೋರಟ ಪೊಲೀಸರು ಕಲ್ಲಪ್ಪನ ಹಿಸ್ಟರಿ ಕಂಡು ದಂಗಾಗಿದ್ದಾರೆ. ಬಂಧನದ ಬಳಿಕ ಕಲ್ಲಪ್ಪನ ಒಟ್ಟು 6 ಪ್ರಕರಣಗಳಲ್ಲಿ ಆರೋಪಿ ಆಗಿದ್ದ ಅನ್ನೋದು ಬೆಳಕಿಗೆ ಬಂದಿದೆ.

ಲಿವ್‌ಇನ್‌ ಗೆಳತಿಯ ಖರ್ಚು ನಿಭಾಯಿಸಲು ಕಲ್ಲಪ್ಪ ಕಳ್ಳತನಕ್ಕೆ ಇಳಿದಿದ್ದ. ಕೂಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಸ್ನೇಹಿತನೊಂದಿಗೆ ಸೇರಿ ಕಳ್ಳತನ ಮಾಡುತ್ತಿದ್ದ. ನಂತರ ಅದನ್ನ ಗೆಳತಿ ಸಹಾಯದಿಂದ ಮಾರಾಟ ಮಾಡುತ್ತಿದ್ದ ಅನ್ನೋದು ಗೊತ್ತಾಗಿದೆ.

ಸದ್ಯ 5 ಮನೆಗಳ್ಳತನ ಪ್ರಕರಣಗಳನ್ನ ಭೇದಿಸಿರುವ ಪೊಲೀಸರು ಶೇ.70 ರಷ್ಟು ಸ್ವತ್ತನ್ನು ವಶಕ್ಕೆ ಪಡೆದಿದ್ದಾರೆ. 7.20 ಲಕ್ಷ ರೂ. ಮೌಲ್ಯದ 61 ಗ್ರಾಂ ಬಂಗಾರ, 680 ಗ್ರಾಂ ಬೆಳ್ಳಿ ವಸ್ತುಗಳನ್ನ ಜಪ್ತಿ ಮಾಡಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

error: Content is protected !!