ಮಧ್ಯಾಹ್ನದ ಊಟಕ್ಕೆ ಒಂದೇ ಸಲ ರುಚಿ, ಕಾರ, ಖಾರ, ಹುಳಿ ಎಲ್ಲವೂ ಬೇಕೆಂದು ಅನಿಸಿದಾಗ ನೆನಪಿಗೆ ಬರುವುದು ಆಂಧ್ರ ಶೈಲಿಯ ಖಾರವಾದ ಅಡುಗೆಗಳು. ಅದರಲ್ಲೂ ಆಂಧ್ರ ಸ್ಟೈಲ್ ಚಿಕನ್ ಕರಿ ಮಾಡಿದ್ರೆ ಬಿಸಿ ಬಿಸಿ ಅನ್ನ, ರಾಗಿ ಮುದ್ದೆ ಅಥವಾ ರೊಟ್ಟಿಗೆ ಅದ್ಭುತ ಕಾಂಬಿನೇಷನ್ ಆಗುತ್ತದೆ.
ಬೇಕಾಗುವ ಸಾಮಗ್ರಿಗಳು
ಚಿಕನ್ – 500 ಗ್ರಾಂ
ಈರುಳ್ಳಿ – 3
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಟೀಸ್ಪೂನ್
ಹಸಿಮೆಣಸು – 4 (ಕತ್ತರಿಸಿದದ್ದು)
ಕೆಂಪು ಮೆಣಸಿನ ಪುಡಿ – 2 ಟೀಸ್ಪೂನ್
ಧನಿಯಾ ಪುಡಿ – 2 ಟೀಸ್ಪೂನ್
ಗರಂ ಮಸಾಲಾ – 1/2 ಟೀಸ್ಪೂನ್
ಅರಿಶಿನ – 1/2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 3 ಟೇಬಲ್ ಸ್ಪೂನ್
ಕರಿಬೇವಿನ ಎಲೆ – ಸ್ವಲ್ಪ
ನಿಂಬೆ ರಸ – ಸ್ವಲ್ಪ
ಅಡುಗೆ ಮಾಡುವ ವಿಧಾನ
ಮೊದಲು ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಕರಿಬೇವು ಮತ್ತು ಹಸಿಮೆಣಸು ಹಾಕಿ. ನಂತರ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೂ ಹುರಿಯಿರಿ. ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೂ ಬೇಯಿಸಿ. ಈಗ ಅರಿಶಿನ, ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ ಸೇರಿಸಿ ಚೆನ್ನಾಗಿ ಕಲಸಿ. ನಂತರ ಚಿಕನ್ ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಚಿಕನ್‌ನಿಂದ ನೀರು ಹೊರಬಂದು ಮತ್ತೆ ಡ್ರೈ ಆಗುವವರೆಗೂ ಬೇಯಿಸಿದ ಬಳಿಕ ಗರಂ ಮಸಾಲಾ ಹಾಕಿ ಮಿಕ್ಸ್ ಮಾಡಿ. ಕೊನೆಗೆ ಸ್ವಲ್ಪ ನಿಂಬೆ ರಸ ಹಾಕಿ ಗ್ಯಾಸ್ ಆಫ್ ಮಾಡಿ.

