ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಷಿಯಲ್ ಮೀಡಿಯಾದಲ್ಲಿ ಈ ವಾರ ಸಂಪೂರ್ಣವಾಗಿ ಸದ್ದು ಮಾಡಿದ್ದು ನಟಿ ಸಮಂತಾ ರುತ್ ಪ್ರಭು ಅವರ ಎರಡನೇ ಮದುವೆಯ ವಿಚಾರ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಹಾಗೂ The Family Man ಸಿರೀಸ್‌ನ ನಿರ್ದೇಶಕ ರಾಜ್ ನಿಡಿಮೊರು ಅವರೊಂದಿಗೆ ಸಮಂತಾ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಶಾ ಫೌಂಡೇಶನ್ನ ಲಿಂಗ ಭೈರವಿಯ ಸನ್ನಿಧಿಯಲ್ಲಿ ಭೂತ ಶುದ್ಧಿ ಸಂಪ್ರದಾಯದಂತೆ ಈ ವಿವಾಹ ನೆರವೇರಿದೆ ಎಂಬ ಸುದ್ದಿ ಅಭಿಮಾನಿಗಳನ್ನು ಖುಷಿಪಡಿಸಿದೆ.
ಈ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದ ನಡುವೆಯೇ, ನಟಿ ಶೋಭಿತಾ ಧೂಳಿಪಾಲ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಗಂಡ ನಾಗ ಚೈತನ್ಯ ಅವರೊಂದಿಗೆ ಇರುವ ಮದುವೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ಸಮಂತಾ ಮದುವೆಯ ಸಮಯದಲ್ಲೇ ಪೋಸ್ಟ್ ಆಗಿರುವುದರಿಂದ ನೆಟ್ಟಿಗರಲ್ಲಿ ಹಲವು ಊಹಾಪೋಹಗಳು ಆರಂಭವಾಗಿದ್ದವು. ಕೆಲವರು ಇದು ಉದ್ದೇಶಪೂರ್ವಕ ಎನ್ನುವ ಮಟ್ಟಿಗೂ ಚರ್ಚಿಸಿದರು. ಆದರೆ ವಾಸ್ತವದಲ್ಲಿ ಇದು ಶೋಭಿತಾ–ನಾಗಚೈತನ್ಯ ದಾಂಪತ್ಯ ಜೀವನದ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮವಾಗಿತ್ತು.
2024ರ ಡಿಸೆಂಬರ್ 4ರಂದು ಅನ್ನಪೂರ್ಣ ಸ್ಟುಡಿಯೋನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಸಂಪ್ರದಾಯಬದ್ಧವಾಗಿ ಇವರ ವಿವಾಹ ನಡೆದಿತ್ತು. ವಾರ್ಷಿಕೋತ್ಸವದ ಪ್ರಯುಕ್ತ ಶೋಭಿತಾ ಹಂಚಿಕೊಂಡ ಈ ವಿಡಿಯೋಗೆ ಭಾವನಾತ್ಮಕ ಕ್ಯಾಪ್ಶನ್ ಕೂಡ ಸೇರಿಸಿ, “ಮಿಸಸ್ ಆಗಿ ಒಂದು ವರ್ಷ” ಎಂದು ಬರೆದುಕೊಂಡಿದ್ದಾರೆ. ಸಮಂತಾ ಮದುವೆ ಸಂಭ್ರಮದ ನಡುವೆ ಈ ಪೋಸ್ಟ್ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಸಿನಿರಂಗದ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

