ಹೊಸ ದಿಗಂತ ವರದಿ, ಪರ್ತಗಾಳಿ:
ಗೋವಾದ ಗೋಕರ್ಣ ಪರ್ತಗಾಳಿ ಮಠದಲ್ಲಿ ಸಾರ್ಧ ಪಂಚಶತಮಾನೋತ್ಸವ ಕಾರ್ಯಕ್ರಮದ ನಿಮಿತ್ತ ಪರ್ತಗಾಳಿ ಮಠಾಽಶ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಗುರುವಾರ ಮಠದ ಪ್ರಾಂಗಣ, ಆದರ್ಶ ಪಾರ್ಕನಲ್ಲಿ ಗಿಡ ನೆಡುವ ಮೂಲಕ ಹಸಿರು ಪರ್ತಗಾಳಿ (ಗ್ರೀನ್ ಪರ್ತಗಾಳಿ) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಸಿರು ಶಕ್ತಿಯನ್ನು ಪ್ರೋತ್ಸಾಹಿಸುವದರಿಂದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆಯಾಗಲಿದೆ. ಮನೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಹಸಿರು ವಾತವರಣ ನಿರ್ಮಾಣಕ್ಕೆ ಗಿಡಗಳನ್ನು ನೆಡುವುದು ಮತ್ತು ಪೋಷಿಸಲು ಶ್ರೀಗಳ ಹಸಿರು ಪರ್ತಗಾಳಿ ಕಾರ್ಯಕ್ರಮ ಭಕ್ತವರ್ಗಕ್ಕೆ, ಸಮಾಜಕ್ಕೆ ಪ್ರೇರಣೆಯಾಗಲಿ ಎನ್ನುವ ಉದ್ದೇಶ ಅವರು ಹೊಂದಿದ್ದಾರೆ. ಶ್ರೀಗಳು ಮೊದಲು ಗಿಡ ನೆಟ್ಟು, ಪರಿಸರ ಮಾತೆಯನ್ನು ಪೂಜಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಅಧ್ಯಕ್ಷ ಶ್ರೀನಿವಾಸ ಧೆಂಪೊ , ಉಪಾಧ್ಯಕ್ಷ ಶಿವಾನಂದ ಸಾಲಗಾಂವಕರ್, ಪ್ರಮುಖರಾದ ದಿನೇಶ ಪೈ, ವೈದಿಕ ವೃಂದ ಸಮಾಜಬಾಂಧವರು ಇದ್ದರು.

