Thursday, December 4, 2025

‘ಗೃಹಲಕ್ಷ್ಮಿ’ಯರ ಆರ್ಥಿಕ ಸ್ವಾವಲಂಬನೆಗೆ ರಾಜ್ಯ ಸರ್ಕಾರದ ‘ಲೋನ್ ಭಾಗ್ಯ’ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಬೃಹತ್ ಆರ್ಥಿಕ ನೆರವು ನೀಡಲು ಮುಂದಾಗಿದೆ. ಇನ್ಮುಂದೆ ಮಹಿಳೆಯರು ಕಡಿಮೆ ಬಡ್ಡಿ ದರದಲ್ಲಿ 30,000 ದಿಂದ ಆರಂಭಿಸಿ 3 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಘೋಷಿಸಿದ್ದಾರೆ.

ಸಾಲದ ಮೊತ್ತವನ್ನು 3 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸುವಂತೆ ಸಚಿವರು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದಾರೆ. ಸಚಿವರ ಈ ಪ್ರಯತ್ನವು ಮಹಿಳೆಯರಿಗೆ ಇನ್ನಷ್ಟು ದೊಡ್ಡ ಮಟ್ಟದ ಆರ್ಥಿಕ ಬೆಂಬಲ ನೀಡುವ ಉದ್ದೇಶ ಹೊಂದಿದೆ.

ಸಾಲ ಪಡೆಯುವ ಪ್ರಕ್ರಿಯೆ ಮತ್ತು ನಿಯಮಗಳು:

ಮೊದಲು ನೋಂದಣಿ ಮಾಡಿಕೊಂಡ ಮಹಿಳೆಯರಿಗೆ ಈ ಸಾಲ ಸೌಲಭ್ಯದ ಪ್ರಯೋಜನ ಸಿಗಲಿದೆ.

ಅರ್ಹ ಗೃಹಲಕ್ಷ್ಮಿಯರು ಕೇವಲ ಆರು ತಿಂಗಳಲ್ಲಿ ವೈಯಕ್ತಿಕ ಸಾಲ ಪಡೆಯಬಹುದು.

ಸದಸ್ಯತ್ವ ಪಡೆಯಲು ತಿಂಗಳಿಗೆ ಕೇವಲ 200 ರಂತೆ ಆರು ತಿಂಗಳವರೆಗೆ ಹಣ ಕಟ್ಟಬೇಕಾಗುತ್ತದೆ.

ರಾಷ್ಟ್ರೀಕೃತ ಬ್ಯಾಂಕುಗಳ ಪ್ರಸ್ತುತ ಬಡ್ಡಿ ದರಗಳ ಅನ್ವಯ ಈ ಸಾಲ ದೊರೆಯಲಿದೆ.

ಈ ಸಾಲವನ್ನು ಪಡೆಯಲು ಅಗತ್ಯವಿರುವ ದಾಖಲೆಗಳ ಪ್ರಮಾಣವು ಅತ್ಯಂತ ಕಡಿಮೆ ಇರಲಿದೆ.

ಈ ಹೊಸ ಉಪಕ್ರಮವು ಗೃಹಲಕ್ಷ್ಮಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಮತ್ತು ತಮ್ಮ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ.

error: Content is protected !!