Friday, December 5, 2025

ಗುಸು ಗುಸು ಗದ್ದಲಕ್ಕೆ ತೆರೆ? ಬೆಳಗಾವಿ ಅಧಿವೇಶನಕ್ಕೂ ಮುನ್ನ ಮಹತ್ವದ ಸಿಎಲ್‌ಪಿ ಸಭೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆಯನ್ನು ಡಿಸೆಂಬರ್ 9, ಮಂಗಳವಾರದಂದು ಕರೆಯಲಾಗಿದೆ. ಪಕ್ಷದಲ್ಲಿ ತಲೆದೋರಿರುವ ‘ಬಣ ರಾಜಕೀಯ’ ಮತ್ತು ‘ಪವರ್ ಶೇರಿಂಗ್’ ಗೊಂದಲದ ನಡುವೆಯೇ ಈ ಸಭೆ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ, ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ಈ ನಿರ್ಣಾಯಕ ಸಿಎಲ್‌ಪಿ ಸಭೆ ನಡೆಯಲಿದೆ.

ಪಕ್ಷದೊಳಗೆ ಆರಂಭವಾಗಿರುವ ಪವರ್ ಶೇರಿಂಗ್ ಸಂಬಂಧಿತ ಗೊಂದಲದಿಂದಾಗಿ ಹಲವು ಕಾಂಗ್ರೆಸ್ ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಗೊಂದಲ ಶುರುವಾದ ನಂತರ ನಡೆಯುತ್ತಿರುವ ಮೊದಲ ಸಿಎಲ್‌ಪಿ ಸಭೆ ಇದಾಗಿರುವುದರಿಂದ, ಶಾಸಕರು ನಾಯಕತ್ವದಿಂದ ಸ್ಪಷ್ಟ ಮತ್ತು ಅಧಿಕೃತ ಮಾಹಿತಿಯನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಬೆಳಗಾವಿ ಅಧಿವೇಶನದ ಕಾರ್ಯತಂತ್ರದ ಬಗ್ಗೆ ಚರ್ಚಿಸುವುದು ಸಭೆಯ ಮುಖ್ಯ ಅಜೆಂಡಾ ಆಗಿದ್ದರೂ, ಇದೇ ಸಂದರ್ಭದಲ್ಲಿ ಆಂತರಿಕವಾಗಿ ತಲೆದೋರಿರುವ ‘ಪವರ್ ಶೇರಿಂಗ್’ ಗೊಂದಲದ ಬಗ್ಗೆಯೂ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ. ಇತ್ತೀಚೆಗೆ ನಡೆದ ‘ಪವರ್ ಫೈಟ್ ಬ್ರೇಕ್ ಫಾಸ್ಟ್ ಪ್ಯಾಚಪ್’ ನಂತರ ನಾಯಕರೊಂದಿಗೆ ಶಾಸಕರು ಒಟ್ಟಾಗಿ ಭಾಗವಹಿಸುತ್ತಿರುವ ಮೊದಲ ಸಭೆ ಇದಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಸಭೆಯಲ್ಲಿ ಗೊಂದಲಗಳಿಗೆ ತೆರೆ ಎಳೆದು ಶಾಸಕರಿಗೆ ಸ್ಪಷ್ಟ ಸಂದೇಶ ರವಾನಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!