Friday, December 5, 2025

Rice series 48 | 10 ನಿಮಿಷದಲ್ಲಿ ರೆಡಿ ಆಗುತ್ತೆ ಕೊತ್ತಂಬರಿ ಸೊಪ್ಪಿನ ರೈಸ್ ಬಾತ್! ನೀವೂ ಟ್ರೈ ಮಾಡಿ

ಹಸಿರು ಕೊತ್ತಂಬರಿ ಸೊಪ್ಪಿನ ಸುವಾಸನೆ ಮತ್ತು ಮಸಾಲೆಯ ಖಾರ ಸೇರಿದಾಗ ಉಂಟಾಗುವ ಹೊಸ ರುಚಿಯೇ ಕೊತ್ತಂಬರಿ ಸೊಪ್ಪಿನ ರೈಸ್ ಬಾತ್. ಇದು ಆರೋಗ್ಯಕರವೂ ಹೌದು, ತಯಾರಿಸುವುದೂ ಬಹಳ ಸುಲಭ. ಲಂಚ್ ಬಾಕ್ಸ್, ಬ್ರೇಕ್ ಫಾಸ್ಟ್, ಟ್ರಾವೆಲ್ ಫುಡ್ ಅಥವಾ ಲೈಟ್ ಡಿನ್ನರ್‌ಗೆ ಈ ರೈಸ್ ಬಾತ್ ಪರ್ಫೆಕ್ಟ್.

ಬೇಕಾಗುವ ಪದಾರ್ಥಗಳು:

ಅನ್ನ – 2 ಕಪ್
ಕೊತ್ತಂಬರಿ ಸೊಪ್ಪು – 1 ದೊಡ್ಡ ಕಟ್ಟು
ಹಸಿಮೆಣಸು – 2
ತೆಂಗಿನಕಾಯಿ ತುರಿ – 2 ಚಮಚ
ಬೆಳ್ಳುಳ್ಳಿ – 3 ಎಸಳು
ಈರುಳ್ಳಿ – 1
ಜೀರಿಗೆ – 1 ಚಮಚ
ಅವರೆ ಕಾಳು / ಕಡಲೆಕಾಯಿ – 2 ಚಮಚ
ಎಣ್ಣೆ – 2 ಚಮಚ
ಉಪ್ಪು – ರುಚಿಗೆ
ನಿಂಬೆಹಣ್ಣಿನ ರಸ – 1 ಚಮಚ

ಮಾಡುವ ವಿಧಾನ:

ಮೊದಲಿಗೆ ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪು, ಹಸಿಮೆಣಸು, ತೆಂಗಿನ ತುರಿ ಮತ್ತು ಬೆಳ್ಳುಳ್ಳಿ ಹಾಕಿ ದಪ್ಪ ಪೇಸ್ಟ್ ಮಾಡಿ. ಬಾಣಲೆ ಬಿಸಿ ಮಾಡಿ ಎಣ್ಣೆ ಹಾಕಿ, ಜೀರಿಗೆ ಮತ್ತು ಕಡಲೆಕಾಯಿಯನ್ನು ಹುರಿಯಿರಿ. ನಂತರ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ತಯಾರಿಸಿದ ಕೊತ್ತಂಬರಿ ಪೇಸ್ಟ್ ಸೇರಿಸಿ ಕಚ್ಚಾ ವಾಸನೆ ಹೋಗುವವರೆಗೆ ಚೆನ್ನಾಗಿ ಹುರಿಯಿರಿ. ಉಪ್ಪು ಸೇರಿಸಿ, ಅನ್ನ ಹಾಕಿ ನಿಧಾನವಾಗಿ ಕಲಸಿ. ಕೊನೆಯಲ್ಲಿ ನಿಂಬೆ ರಸ ಹಾಕಿ ಮಿಶ್ರಣ ಮಾಡಿ.

error: Content is protected !!