Friday, December 5, 2025

ಟೊಮ್ಯಾಟೊ ಮುಟ್ಟುವಂತಿಲ್ಲ, ಆದರೆ ಈರುಳ್ಳಿ ದರ ಇದ್ದಕ್ಕಿದ್ದಂತೆಯೇ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಟೊಮ್ಯಾಟೊ ದರ ಮುಗಿಲುಮುಟ್ಟಿದೆ, ಆದರೆ ಇದ್ದಕ್ಕಿದ್ದಂತೆಯೇ ಈರುಳ್ಳಿ ದರ ಕಡಿಮೆಯಾಗಿದ್ದು, ರೈತರಲ್ಲಿ ಕಣ್ಣೀರು ತರಿಸಿದೆ.

ರಾಯಚೂರು ಜಿಲ್ಲೆಯ ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದಾಗಿ ಕಣ್ಣೀರು ಹಾಕುವಂತಾಗಿದೆ. ದಿನದಿಂದ ದಿನಕ್ಕೆ ಪಾತಾಳಕ್ಕೆ ಕುಸಿಯುತ್ತಿರುವ ಈರುಳ್ಳಿ ಬೆಲೆಯಿಂದಾಗಿ ರೈತರು ತಮ್ಮ ಬೆಳೆಯನ್ನ ಮಾರುಕಟ್ಟೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ.

ಸಾಗಾಟದ ವೆಚ್ಚ, ಕೂಲಿ ಖರ್ಚು ವಾಪಸ್ ಬರಲ್ಲ ಅಂತ ರೈತರು ತಮ್ಮ ಈರುಳ್ಳಿ ಬೆಳೆಯನ್ನು ತಾವೇ ನಾಶ ಮಾಡುತ್ತಿದ್ದಾರೆ. ಟ್ರ‍್ಯಾಕ್ಟರ್ ರೂಟವೇಟರ್‌ನಿಂದ ಭೂಮಿಯೊಳಗಿನ ಈರುಳ್ಳಿಗೆಡ್ಡೆಗಳನ್ನ ಹೊರತೆಗೆದು ನಾಶ ಮಾಡುತ್ತಿದ್ದಾರೆ.

ಕೂಲಿ, ಗೊಬ್ಬರ, ಕಳೆ ಕೀಟನಾಶಕ ಅಂತ ಎಕರೆಗೆ 70 ರಿಂದ 80 ಸಾವಿರ ರೂ. ಖರ್ಚು ಮಾಡಿದ್ದ ರೈತರ ಈರುಳ್ಳಿ ಕ್ವಿಂಟಾಲ್‌ಗೆ 500 ರಿಂದ 800 ರೂ. ಮಾತ್ರ ಬೆಲೆ ಸಿಗುತ್ತಿದೆ. ಇನ್ನೂ ತರಕಾರಿ ಮಾರುಕಟ್ಟೆಯಲ್ಲಿ 10 ರಿಂದ 15 ರೂ.ಗೆ ಕೆ.ಜಿ ಮಾರಾಟವಾಗುತ್ತಿದೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.

error: Content is protected !!