Friday, December 5, 2025

ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ ಬೊಲೆರೊ: ಸ್ಥಳದಲ್ಲೇ ಐವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉತ್ತರಾಖಂಡದ ಚಂಪಾವತ್ ತನಕ್‌ಪುರ-ಪಿಥೋರಗಢ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ರಸ್ತೆ ಅಪಘಾತ ಸಂಭವಿಸಿದೆ.

ಬಾಗ್ಧಾರ ಬಳಿ ಮದುವೆ ಮೆರವಣಿಗೆಯಿಂದ ಹಿಂತಿರುಗುತ್ತಿದ್ದ ಬೊಲೆರೊ ಜೀಪ್ ಬೆಳಗಿನ ಜಾವ 2.30 ರ ಸುಮಾರಿಗೆ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದಾರೆ.

ಮಾಹಿತಿ ಪಡೆದ ಲೋಹಘಾಟ್ ಪೊಲೀಸ್ ಠಾಣೆಯ ಉಸ್ತುವಾರಿ ಅಶೋಕ್ ಕುಮಾರ್ ಸಿಂಗ್ ನೇತೃತ್ವದ ಎಸ್‌ಡಿಆರ್‌ಎಫ್ ಮತ್ತು ಅಗ್ನಿಶಾಮಕ ದಳದ ತಂಡವು ಕಾರ್ಯಾಚರಣೆ ಪ್ರಾರಂಭಿಸಿ, ಗಾಯಾಳುಗಳನ್ನು ಹೊರಕರೆತಂದು ಲೋಹಘಾಟ್ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಭಾವನಾ ಚೌಬೆ, ಅವರ ಮಗ ಪ್ರಿಯಾಂಶು, ಪ್ರಕಾಶ್ ಚಂದ್ರ ಉನಿಯಾಲ್ (40), ಕೇವಲ್ ಚಂದ್ರ ಉನಿಯಾಲ್ (35), ಮತ್ತು ಸುರೇಶ್ ನೌಟಿಯಾಲ್ (32) ಎಂದು ಗುರುತಿಸಲಾಗಿದೆ.

error: Content is protected !!