Friday, December 5, 2025

FOOD | ಪ್ರೋಟೀನ್ ಭರಿತ ಎಗ್ ಸೋಯಾ ಭುರ್ಜಿ ಟ್ರೈ ಮಾಡಿ! ಏನ್ ರುಚಿ ಅಂತೀರಾ?

ಮಧ್ಯಾಹ್ನದ ಊಟಕ್ಕೆ ತ್ವರಿತವಾಗಿ ತಯಾರಾಗುವ, ಆದರೆ ತಿನ್ನೋಕೆ ತುಂಬಾ ರುಚಿಕರವೂ ಪೌಷ್ಟಿಕವೂ ಆಗಿರೋ ಒಂದು ಐಟಂ ಬೇಕಾದರೆ ಎಗ್ ಸೋಯಾ ಭುರ್ಜಿ ಸೂಪರ್ ಆಯ್ಕೆ. ಮೊಟ್ಟೆ ಮತ್ತು ಸೋಯಾ ಚಂಕ್ಸ್‌ನ ಕಾಂಬಿನೇಶನ್ ನಿಮ್ಮ ದಿನನಿತ್ಯಕ್ಕೆ ಅಗತ್ಯವಾದ ಪ್ರೋಟೀನ್‌ನ್ನು ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು

ಮೊಟ್ಟೆ – 3
ಸೋಯಾ ಚಂಕ್ಸ್ – 1 ಕಪ್
ಈರುಳ್ಳಿ – 1
ಟೊಮೇಟೋ – 1
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಹಳದಿ ಪುಡಿ – ½ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 2 ಟೇಬಲ್‌ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಮೊದಲಿಗೆ ಸೋಯಾ ಚಂಕ್ಸ್’ನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ, ಚೆನ್ನಾಗಿ ಒತ್ತಿ ನೀರು ತೆಗೆದುಬಿಡಿ.

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ, ಹಸಿಮೆಣಸು ಹಾಕಿ ಫ್ರೈ ಮಾಡಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಟೊಮೇಟೋ, ಹಳದಿ, ಕೆಂಪು ಮೆಣಸು ಮತ್ತು ಉಪ್ಪು ಸೇರಿಸಿ ಮಸಾಲೆ ಸಾಫ್ಟ್ ಆಗುವವರೆಗೆ ಬೇಯಿಸಿ. ಈಗ ನೆನೆಸಿದ ಸೋಯಾ ಚಂಕ್ಸ್ ಸೇರಿಸಿ 3-4 ನಿಮಿಷ ಫ್ರೈ ಮಾಡಿ.

ಈಗ ಮೇಲೆ ಮೊಟ್ಟೆ ಒಡೆದು ಹಾಕಿ, scrambled ಮಾಡುವಂತೆ ಚೆನ್ನಾಗಿ ಕಲಸಿ ಬೇಯಿಸಿ. ಕೊನೆಯಲ್ಲಿ ಗರಂ ಮಸಾಲಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.

error: Content is protected !!