ದಿನವನ್ನು ಎನರ್ಜೆಟಿಕ್ ಆಗಿ, ಶಕ್ತಿಯುತವಾಗಿ ಆರಂಭಿಸಬೇಕೆಂದರೆ ಬಾಳೆಹಣ್ಣು ಒಳ್ಳೆಯ ಆಯ್ಕೆ. ಆದರೆ ಕೆಲವೊಮ್ಮೆ ಆರೋಗ್ಯಕರ ಆಹಾರವೇ, ತಪ್ಪಾದ ಸಂಯೋಜನೆಗಳಿಂದ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾವು ಗಮನಿಸೋದಿಲ್ಲ. ವಿಶೇಷವಾಗಿ ಬಾಳೆಹಣ್ಣು ತಿಂದ ನಂತರ ಕೆಲವು ಆಹಾರಗಳನ್ನು ಸೇವಿಸಿದರೆ, ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು.
- ನೀರು: ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವುದು ಜೀರ್ಣಕ್ರಿಯೆಯ ವೇಗವನ್ನು ತಗ್ಗಿಸುತ್ತದೆ. ಇದರಿಂದ ಹೊಟ್ಟೆನೋವು, ಗ್ಯಾಸ್ ಮತ್ತು ಉಬ್ಬರದ ಸಮಸ್ಯೆಗಳು ಹೆಚ್ಚುವ ಸಾಧ್ಯತೆ.
- ಹಾಲು: ಹಾಲು + ಬಾಳೆಹಣ್ಣು ಎನ್ನುವ ಸಂಯೋಜನೆಯನ್ನು ಆಯುರ್ವೇದ “ವಿಷಕಾರಿ” ಎಂದು ವರ್ಣಿಸುತ್ತದೆ. ಈ ಮಿಶ್ರಣದಿಂದ ಅಜೀರ್ಣ, ದದ್ದುಗಳು, ಚರ್ಮ ಅಲರ್ಜಿ ಮುಂತಾದ ಸಮಸ್ಯೆಗಳು ಉಂಟಾಗಬಹುದು.
- ಐಸ್ ಕ್ರೀಂ ಮತ್ತು ಸಿಹಿತಿಂಡಿಗಳು: ಬಾಳೆಹಣ್ಣು ತಿಂದ ಮೇಲೆಯೇ ತಣ್ಣನೆಯ ಐಸ್ ಕ್ರೀಂ ಅಥವಾ ಹೆಚ್ಚು ಸಿಹಿ ಇರುವ ಆಹಾರ ತೆಗೆದುಕೊಂಡರೆ ಗಂಟಲು ಸಮಸ್ಯೆ, ಶೀತ–ಕೆಮ್ಮು, ತಲೆನೋವು ಉಂಟಾಗುವ ಸಾಧ್ಯತೆ ಹೆಚ್ಚು.
- ನಿದ್ರೆ: ಕೆಲವರು ಬಾಳೆಹಣ್ಣು ತಿಂದ ತಕ್ಷಣ ನಿದ್ರೆಹೋಗುತ್ತಾರೆ. ಇದು ಗ್ಯಾಸ್ಟ್ರಿಕ್, ಭಾರವಾದ ಹೊಟ್ಟೆ ಮತ್ತು ತೂಕ ಹೆಚ್ಚುವಂತೆ ಮಾಡುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

