January21, 2026
Wednesday, January 21, 2026
spot_img

ಇಂಡಿಗೋ ಸಂಕಷ್ಟ: ಹಕ್ಕಿಯಂತೆ ಆಕಾಶಕ್ಕೆ ಹಾರಿದ ಟಿಕೆಟ್ ರೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ವಿಮಾನಯಾನ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಇಂಡಿಗೋ ಬಿಕ್ಕಟ್ಟು, ಈಗ ಟಿಕೆಟ್ ದರಗಳನ್ನೇ ಗಗನಕ್ಕೇರಿಸಿವೆ. ಸಾಮಾನ್ಯ ದಿನಗಳಲ್ಲಿ ಕೆಲವು ಸಾವಿರಕ್ಕೆ ಲಭ್ಯವಾಗುತ್ತಿದ್ದ ದೆಹಲಿ–ಚೆನ್ನೈ ಮಾರ್ಗ ಇಂದು ಲಕ್ಷದ ಗಡಿಯನ್ನು ದಾಟಿದೆ. ದೆಹಲಿ–ಮುಂಬೈ, ದೆಹಲಿ–ಹೈದರಾಬಾದ್, ದೆಹಲಿ–ಕೋಲ್ಕತ್ತಾ ಸೇರಿದಂತೆ ಪ್ರಮುಖ ಮಾರ್ಗಗಳಲ್ಲೂ 50,000 ರಿಂದ 60,000 ರವರೆಗೆ ದರಗಳು ಏರಿಕೆಯಾಗಿವೆ. ಈ ನಡುವೆ, ಡಿಜಿಸಿಎ ಪೈಲಟ್‌ಗಳ ವಾರದ ಕಡ್ಡಾಯ ವಿಶ್ರಾಂತಿ (FTDL) ಆದೇಶವನ್ನು ಹಿಂತೆಗೆದುಕೊಂಡಿರುವುದಾಗಿ ಘೋಷಿಸಿದೆ.

ದೆಹಲಿಯಿಂದ ಗೋವಾಗೆ 63,000, ಕೋಲ್ಕತ್ತಾಗೆ 76,000, ಬೆಂಗಳೂರು ಮತ್ತು ರಾಂಚಿಗೆ 36,000, ಪುಣೆಗೆ 53,000 ದರಗಳು ದಾಖಲಾಗಿವೆ. ದೆಹಲಿಯಿಂದ ಲಂಡನ್‌ಗೆ 25,000–30,000 ಮತ್ತು ನ್ಯೂಯಾರ್ಕ್‌ಗೆ 59,000 ದರ ತೋರಿಸುತ್ತಿದ್ದರೆ, ದೇಶೀಯ ವಿಮಾನಗಳೇ ಅಸಹಜವಾಗಿ ದುಬಾರಿ ಆಗಿವೆ.

ಇನ್ನೊಂದೆಡೆ, ದೆಹಲಿ–ಮುಂಬೈ ಮಾರ್ಗದಲ್ಲಿ “ವಿಮಾನ ಲಭ್ಯವಿಲ್ಲ” ಎಂಬ ಸಂದೇಶ ಕಾಣಿಸಿಕೊಂಡಿದ್ದು ಪ್ರಯಾಣಿಕರ ಆತಂಕ ಹೆಚ್ಚಿಸಿದೆ. ವಿಮಾನ ನಿಲ್ದಾಣದಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ಕಾಯುತ್ತಿರುವವರಿಗೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲರೂ ಇಂಡಿಗೋ ಸಿಬ್ಬಂದಿಗೆ ತಮ್ಮ ಅಸಮಾಧಾನವನ್ನು ತೋರುತ್ತಿದ್ದಾರೆ.

Must Read