Friday, December 5, 2025

ಆರ್ಥಿಕ ಬಲ ಹೆಚ್ಚಿಸಲು ‘ವಿಷನ್ 2030′: ಮೋದಿ- ಪುಟಿನ್ ಮಧ್ಯೆ ದ್ವಿಪಕ್ಷಿಯ ಒಪ್ಪಂದಕ್ಕೆ ಸಹಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ರಷ್ಯಾ ದೇಶಗಳ ನಡುವಿನ ಆರ್ಥಿಕ ಸಹಕಾರ ಹೆಚ್ಚಿಸಲು `ವಿಷನ್ 2030′ ದಾಖಲೆಗೆ ಸಹಿ ಹಾಕಿವೆ. ಈ ಮೂಲಕ ಉಭಯ ರಾಷ್ಟ್ರಗಳು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ಜೊತೆಗೆ ಹಲವಾರು ವ್ಯಾಪಾರ ಮಾರ್ಗಗಳನ್ನ ತೆರೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಆರ್ಥಿಕ ಸಹಕಾರ ಮತ್ತಷ್ಟು ಹೆಚ್ಚಿಸಲು, ನಾವು ʻವಿಷನ್ 2030ʼ ದಾಖಲೆಗೆ ಸಹಿ ಹಾಕಿದ್ದೇವೆ. ಇಂದು, ನಾವಿಬ್ಬರೂ ಭಾರತ-ರಷ್ಯಾ ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸಿದ್ದೇವೆ. ಈ ಒಪ್ಪಂದವು ಆದ್ಯತೆಯ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಜೊತೆಗೆ ಎರಡೂ ದೇಶಗಳ ನಡುವಿನ ದೀರ್ಘಕಾಲೀನ ಆರ್ಥಿಕ ಸಂಬಂಧವನ್ನ ಇನ್ನಷ್ಟು ಬಲಪಡಿಸುತ್ತದೆ. ಅಲ್ಲದೇ ಸಹ-ಉತ್ಪಾದನೆ ಮತ್ತು ಸಹ-ನಾವೀನ್ಯತೆಗಾಗಿ ಹೊಸ ಮಾರ್ಗಗಳನ್ನ ತೆರೆಯುತ್ತವೆ ಎನ್ನೋ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದರು.

ಯುರೇಷಿಯನ್ ಆರ್ಥಿಕ ಒಕ್ಕೂಟದೊಂದಿಗೆ FTA ಅನ್ನು ಸಾಕಾರಗೊಳಿಸಲು ಎರಡೂ ದೇಶಗಳು ಹೊಸ ಕ್ರಮಗಳನ್ನ ತೆಗೆದುಕೊಳ್ಳುತ್ತಿವೆ ಎಂದರು.

ಭಾರತೀಯ ರಫ್ತುದಾರರನ್ನು ಬೆಂಬಲಿಸಲು ಪಾವತಿಗಳು, ಪ್ರಮಾಣೀಕರಣಗಳು ಮತ್ತು ಇತರ ನಿಯಂತ್ರಕ ಷರತ್ತುಗಳಿಗೆ ಸಂಬಂಧಿಸಿದ ಅವಶ್ಯಕತೆಗಳನ್ನು ಸಡಿಲಿಸಲು ಸಿದ್ಧರಿದ್ದೇವೆ ಎಂದು ರಷ್ಯಾದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!