ಮೇಷ
ಅಧಿಕ ಕೆಲಸದ ಒತ್ತಡ. ವಿರಾಮ ಬಯಸಿದರೂ ಸಿಗದು. ಸಣ್ಣ ಮಟ್ಟಿನ ಆರೋಗ್ಯ ಸಮಸ್ಯೆ. ಮನೆಯಲ್ಲಿ ವಾಗ್ವಾದ ಉಂಟಾದೀತು.
ವೃಷಭ
ಯಾವುದೇ ಸವಾಲು ಎದುರಿಸಲು ಸಿದ್ಧರಾಗಿ. ಏಕೆಂದರೆ ಹೊಸ ಸಮಸ್ಯೆ ಎದುರಾಗಲಿದೆ. ಶಕ್ತರಾಗುವಿರಿ. ಆರ್ಥಿಕ ಪ್ರಗತಿ ಸಾಧಾರಣ.
ಮಿಥುನ
ಏರುಪೇರು ಇಲ್ಲದ ಸಹಜ ದಿನ. ಕುಟುಂಬ ಸದಸ್ಯರ ಬೇಡಿಕೆಗೆ ಸ್ಪಂದಿಸಿ. ಸಂಪರ್ಕ ಕಡಿದುಕೊಂಡಿದ್ದವರು ಮತ್ತೆ ಸಿಗುತ್ತಾರೆ.
ಕಟಕ
ನಡೆನುಡಿಯಲ್ಲಿ ಪಕ್ವತೆ ಇರಲಿ. ಬೇಕಾಬಿಟ್ಟಿ ವರ್ತನೆ ಪ್ರತಿಕೂಲ ಪರಿಣಾಮ ಬೀರೀತು. ಖರೀದಿಯ ಹುಮ್ಮಸ್ಸು ಖರ್ಚು ಹೆಚ್ಚಿಸಲಿದೆ.
ಸಿಂಹ
ಉತ್ಸಾಹದಿಂದ ದಿನದ ಆರಂಭ. ಆದರೆ ಬಳಿಕ ನಿರುತ್ಸಾಹದ ಬೆಳವಣಿಗೆ ನಡೆದೀತು. ಕೌಟುಂಬಿಕ ಒತ್ತಡ. ಅಽಕ ವ್ಯಯದ ಚಿಂತೆ.
ಕನ್ಯಾ
ನಿಮ್ಮ ಭಾವನೆಗೆ ಸ್ಪಂದಿಸುವ ಜನರ ಜತೆ ಸಮಯ ಕಳೆಯಿರಿ. ಅದರಿಂದ ಬೇಸರ ಕಡಿಮೆಯಾದೀತು. ಸಾಂತ್ವನ ದೊರಕೀತು. ತುಲಾ
ನಿಮ್ಮ ದೌರ್ಬಲ್ಯ ಮೇಲುಗೈ ಸಾಽಸಲು ಬಿಡಬೇಡಿ. ದೃಢ ಮನಸ್ಥಿತಿ ಪ್ರದರ್ಶಿಸಿ. ಪ್ರತಿಕೂಲ ಪರಿಸ್ಥಿತಿ ಬಹುತೇಕ ಅಂತ್ಯವಾಗಲಿದೆ.
ವೃಶ್ಚಿಕ
ನಿಮ್ಮ ಕಾರ್ಯಕ್ಕೆ ಮೆಚ್ಚುಗೆ. ವೇತನ ಏರಿಕೆ ಆದೀತು. ಹೊರಗಿನ ಆಹಾರ ಸೇವನೆ ಹೊಟ್ಟೆ ಕೆಡಿಸಬಹುದು. ಆತ್ಮೀಯ ಬಂಧುಗಳ ಭೇಟಿ.
ಧನು
ವೃತ್ತಿಗೆ ಸಂಬಂಽಸಿ ಅನುಕೂಲ ಬೆಳವಣಿಗೆ. ಜಡತ್ವ ಬಿಟ್ಟು ಕೆಲಸ ಮಾಡಿ. ಅಜೀರ್ಣದ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುವಿರಿ.
ಮಕರ
ವೃತ್ತಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ನಡೆದೀತು. ಅದಕ್ಕೆ ಹೊಂದಿಕೊಂಡು ಹೋಗಿ. ಬಾಂಧವ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆ.
ಕುಂಭ
ಆಪ್ತರೊಬ್ಬರ ಕುರಿತಂತೆ ಕಾಳಜಿ ವಹಿಸುವಿರಿ. ಅವರ ಸಮಸ್ಯೆಗೆ ಸ್ಪಂದಿಸುವಿರಿ. ಸಣ್ಣ ಹಿನ್ನಡೆಗೆ ಸ್ಥೈರ್ಯ ಕುಂದದಿರಲಿ.
ಮೀನ
ಕಷ್ಟದ ಸಮಯ ಕಳೆಯಿತೆಂಬ ನಿರಾಳ ಭಾವ ಮೂಡಬಹುದು. ಆದರೆ ಹೊಸ ಸಮಸ್ಯೆ ತಲೆದೋರಬಹುದು. ಸ್ಥೈರ್ಯ ತುಂಬಿಕೊಳ್ಳಿ.
ದಿನಭವಿಷ್ಯ: ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ, ಹಣಕಾಸಿನಲ್ಲಿ ಸ್ಥಿರತೆ

