ಅನ್ನವಿಲ್ಲದ ಬರೇ ಚಪಾತಿ ಊಟ ಅಪೂರ್ಣ ಅನ್ನಿಸುವುದು ಭಾರತೀಯರ ಸಹಜ ಭಾವನೆ. ಯಾವ ಋತುವೇ ಇರಲಿ, ಅನ್ನದ ಜೊತೆಗಿನ ಊಟಕ್ಕೆ ಇರುವ ಸಂತೋಷವೇ ಬೇರೆ. ಆದರೆ ದಿನನಿತ್ಯದ ಅಡುಗೆಯಲ್ಲಿ ಕೆಲವೊಮ್ಮೆ ಅನ್ನ ಜಾಸ್ತಿಯಾಗುವುದು ಸಾಮಾನ್ಯ. ಅದನ್ನು ವ್ಯರ್ಥ ಮಾಡದೇ ಉಳಿಸಿಕೊಳ್ಳಬೇಕು ಅನ್ನೋ ಒಳ್ಳೆಯ ಉದ್ದೇಶದಿಂದ ಫ್ರಿಜ್‌ನಲ್ಲಿ ಇಡುತ್ತೇವೆ. ಆದರೆ ಈ ಸಣ್ಣ ನಿರ್ಲಕ್ಷ್ಯವೇ ಆರೋಗ್ಯಕ್ಕೆ ದೊಡ್ಡ ಸಮಸ್ಯೆ ತರಬಹುದು. ಉಳಿದ ಅನ್ನವನ್ನು ಹೇಗೆ ಸಂರಕ್ಷಿಸಬೇಕು, ಎಷ್ಟು ದಿನ ಸುರಕ್ಷಿತವಾಗಿ ತಿನ್ನಬಹುದು ಅನ್ನೋದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
- ಅನ್ನ ಬೇಯಿಸಿದ ತಕ್ಷಣ ಇಡಬೇಡಿ: ಬಿಸಿ ಅನ್ನವನ್ನು ನೇರವಾಗಿ ಫ್ರಿಜ್‌ಗೆ ಇಟ್ಟರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಜಾಸ್ತಿ. ಮೊದಲು ಅನ್ನ ಸಂಪೂರ್ಣವಾಗಿ ತಣ್ಣಗಾಗಲಿ.
- 24 ಗಂಟೆಗಳ ಒಳಗೆ ಸಂಗ್ರಹಣೆ ಅಗತ್ಯ: ಅನ್ನವನ್ನು ಬೇಯಿಸಿದ ನಂತರ ಒಂದು ದಿನದ ಒಳಗೆ ಫ್ರಿಜ್‌ನಲ್ಲಿ ಇಡುವುದು ಬಹಳ ಮುಖ್ಯ. ತಡವಾದರೆ ಅದು ಸುರಕ್ಷಿತವಾಗಿರುವುದಿಲ್ಲ.
- 3–5 ದಿನಗಳ ಮಿತಿಯೊಳಗೆ ಬಳಕೆ: ಸರಿಯಾಗಿ ಸಂಗ್ರಹಿಸಿದ ಅನ್ನವನ್ನು ಫ್ರಿಜ್‌ನಲ್ಲಿ 3ರಿಂದ 5 ದಿನಗಳವರೆಗೆ ಮಾತ್ರ ಉಪಯೋಗಿಸಲು ಸೂಕ್ತ.
- ಮುಚ್ಚಿದ ಪಾತ್ರೆಯಲ್ಲಿ ಇಡಿ: ಅನ್ನವನ್ನು ಗಾಳಿಯಾಡದ ಪಾತ್ರೆಯಲ್ಲಿ ಇಟ್ಟರೆ ದುರ್ವಾಸನೆ ಮತ್ತು ಕೀಟಾಣುಗಳಿಂದ ರಕ್ಷಿಸಬಹುದು.
- ತೆಗೆದ ತಕ್ಷಣ ಚೆನ್ನಾಗಿ ಬಿಸಿ ಮಾಡಿ: ಫ್ರಿಜ್‌ನಿಂದ ಹೊರತೆಗೆದ ಅನ್ನವನ್ನು ಮರುಬಳಕೆಗೂ ಮೊದಲು ಒಮ್ಮೆ ಚೆನ್ನಾಗಿ ಕುದಿಸಿ ಬಿಸಿ ಮಾಡಿ ಸೇವಿಸಬೇಕು.

