ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕೀಯದಲ್ಲಿ ಸದ್ಯ ಕೈ ಗಡಿಯಾರದ ಜಟಾಪಟಿ ಜೋರಾಗಿದೆ. ನೋಡಪ್ಪಾ ನಾನು ಎಷ್ಟು ವಾಚ್ ಬೇಕಾದ್ರು ನನ್ನ ದುಡ್ಡಲ್ಲಿ ತೆಗೆದುಕೊಳ್ಳುವ ಶಕ್ತಿ ನನಗಿದೆ. ಯಾರು ಪ್ಯಾಂಟ್ ಹಾಕ್ತಾರೆ, ವಾಚ್ ಹಾಕ್ತಾರೆ, ಕನ್ನಡಕ ಹಾಕೋತಾರೆ ನಾನು ಪ್ರಶ್ನೆ ಮಾಡೋಕೆ ಹೋಗೊಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಅವರವರ ವೈಯಕ್ತಿಕ ವಿಚಾರ, ಆಸೆಗಳು. ಕೆಲವರು ಒಂದು ಸಾವಿರದ ಶೂ ಹಾಕೋತಾರೆ ಕೆಲವರು ಒಂದು ಲಕ್ಷದ ಶೂ ಹಾಕೋತಾರೆ. ನಾನು ಒಂದು ಸಾವಿರದ ವಾಚ್ ಆದ್ರೂ ಕಟ್ಟುತ್ತೇನೆ, ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ. ಅದು ನನ್ನ ಆಸ್ತಿ, ನನ್ನ ಸಂಪಾದನೆ, ಶ್ರಮ, ಕಷ್ಟ ಎಂದರು.
ಏನೋ ಪಾಪ ವಿರೋಧ ಪಾರ್ಟಿ ಗೊತ್ತಿಲ್ಲದೆ ಮಾತಾಡಿದ್ದಾರೆ ಬಿಡಿ. ಬಿಜೆಪಿ ಲೀಡರ್‌ಗಳಿಗೆ ನನ್ನ ವ್ಯವಹಾರ ಏನು ಎಂಬುದು ಗೊತ್ತಿದೆ. ಇವರಿಗೇನೋ ಗೊತ್ತಿಲ್ಲ ಅನ್ಸುತ್ತೆ. ಇರ್ಲಿ ಬಿಡಿ ಪಾಪ ಎಂದು ಲೇವಡಿ ಮಾಡಿದರು.

