Saturday, December 6, 2025

ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಸರ್ಕಾರ ಬದ್ಧ: ಸಚಿವ ಎಂ.ಬಿ. ಪಾಟೀಲ್

ಹೊಸ ದಿಗಂತ ವರದಿ, ವಿಜಯಪುರ:

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಚರ್ಚೆ ಆಗಬೇಕು. ಈ ವಿಚಾರದಲ್ಲಿ ಸರ್ಕಾರ ಕೂಡ ಬದ್ಧವಾಗಿದೆ, ಚರ್ಚೆ ಕೂಡ ಆಗುತ್ತೆ ಪರಿಹಾರ ಕೊಡಲು ಸರ್ಕಾರ ಬದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದ ವಿಚಾರಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕಬ್ಬು ಬೆಳೆಗಾರರ ಸಮಸ್ಯೆ ವಿಚಾರದಲ್ಲಿ ಕೇಂದ್ರ ಸರ್ಕಾರ ನೆರವಿಗೆ ಬಂತಾ ?, ಎಫ್‌ಆರ್‌ಪಿ ಫಿಕ್ಸ್ ಮಾಡುವುದು ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರ ಒಂದು ರೂಪಾಯಿ ಕೂಡ ಕೊಟ್ಟಿಲ್ಲ. ಏಥಿನಾಲ್ ಕೂಡ ಅವರು ಶೇ.50 ರಷ್ಟು ಖರೀದಿ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿಯವರಿಗೆ ಹೋಗಿ ಭೇಟಿಯಾದರೂ ಏನಾದರೂ ಕೊಟ್ಟರಾ ?, ಸದ್ಯ ಮೆಕ್ಕೆಜೋಳಕ್ಕೆ ಏನಾದರೂ ಕೊಟ್ಟರೂ, ಕಬ್ಬು ಹಾಗೂ ಮೆಕ್ಕೆಜೋಳ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.

ಯಡಿಯೂರಪ್ಪ ಸುಪುತ್ರ ವಿಜಯೇಂದ್ರ ರೈತರ ಹೋರಾಟದಲ್ಲಿ ಹೋಗಿ ಮಲಗುತ್ತಾರೆ. ಮೊದಲು ಕೇಂದ್ರದಲ್ಲಿ ಪರಿಹಾರ ಕೊಡಿಸಲಿ. ಕಬ್ಬು ಬೆಳೆಗಾರರ ಹೋರಾಟ, ಮೆಕ್ಕೆಜೋಳದ ಹೋರಾಟ ಕೇಂದ್ರ ಸರ್ಕಾರದ್ದು ಎಂದರು.

ಈ ಬಾರಿ ಚುನಾವಣೆಯಲ್ಲಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಪಾಠ ಕಲಿಸಲಾಗುವುದು ಎಂದು ಜನಾರ್ಧನ ರೆಡ್ಡಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಜನಾರ್ಧನ್ ರೆಡ್ಡಿ ದರೋಡೆಕೋರ, ಲೂಟಿಕೋರ, ಆತನ ಬಗ್ಗೆ ನಾನು ಮಾತನಾಡಲ್ಲ. ಈ ಬಾರಿ ಚುನಾವಣೆಯಲ್ಲಿ ಜನಾರ್ಧನ ರೆಡ್ಡಿ ಸೋಲುತ್ತಾರೆ. ಆತ ದರೋಡೆಕೋರ, ಲೂಟಿಕೋರ, ಆತನ ಇತಿಹಾಸ ಇಡೀ ಜಗತ್ತಿಗೆ ಗೊತ್ತಿದೆ. ರಾಜ್ಯದ ಸಂಪತ್ತನ್ನು ಲೂಟಿ ಹೋಡೆದು, ಅಲ್ಲಿರುವ ದೇವಿಯ ಗುಡಿ ಕೂಡ ಕಿತ್ತು ಹಾಕಿದರು. ಅದರ ಶಾಪ ಇವರಿಗೆ ತಟ್ಟಿದೆ ಎಂದರು.

ಇಂಡಿಗೋ ವಿಮಾನ ಹಾರಾಟದ ವಿಳಂಬ ಪ್ರಯಾಣಿಕರ ಪರದಾಟ ವಿಚಾರಕ್ಕೆ, ಅದರಲ್ಲಿ ಕೇಂದ್ರ ಸರ್ಕಾರದ್ದು ತಪ್ಪಿದೆ. ಕೇಂದ್ರ ಸರ್ಕಾರ ಈಗ ವಿಡ್ರಾ ಮಾಡಿದೆ, ಈಗ ಯಾಕೆ ಮಾಡಿತು ?, ಸರಿಯಾಗಿ ಅರೆಂಜ್‌ಮೆಂಟ್ ಮಾಡಿ ಕೊಡಬೇಕಿತ್ತು. ಏರ್ ಪೋರ್ಟ್ ಕೂಡ ಬಸ್ ಸ್ಟ್ಯಾಂಡ್ ತರ ಆಗಿತ್ತು ಎಂದರು.

ಡಿ.ಕೆ. ಶಿವಕುಮಾರ ಎಂ.ಬಿ. ಪಾಟೀಲ ಅವರಿಗೆ ಭೇಟಿ ವಿಚಾರಕ್ಕೆ, ನಿನ್ನೆ ನನಗೂ ಕೂಡ ಭೇಟಿ ಆಗಿದ್ದರು. ಅವರು ಕೆಪಿಸಿಸಿ ಅಧ್ಯಕ್ಷರು ಭೇಟಿ ಆಗುವುದರಲ್ಲಿ ತಪ್ಪೇನಿದೆ. ನನ್ನ ಮೂರು ಕೆಲಸಗಳಿದ್ದವು ಅದಕ್ಕೆ ಭೇಟಿ ಆಗಿದ್ದೇವೆ. ದೀಪಾವಳಿ ಗಿಪ್ಟ್, ಸ್ವೀಟ್ ಕೊಟ್ಟೆವೆ ಅಲ್ಲೆ ತಗೆದು ತಿಂದಿದ್ದಾರೆ. ಸಿಎಂ ಕುರ್ಚಿ ವಿಚಾರ ಏನೂ ಚರ್ಚೆ ಆಗಿಲ್ಲ. ನಮ್ಮ ಪಕ್ಷದಲ್ಲಿ ಹೈ ಕಮಾಂಡ್ ಸುಪ್ರೀಂ ಎಂದರು.

error: Content is protected !!