ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಮುಂಜಾನೆ ಅಲಾಸ್ಕಾ–ಕೆನಡಾ ಗಡಿಯ ಸಮೀಪ 7.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವ ಜನರಿಗೆ ಉಂಟಾಗಿದೆ.
ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವೇ ಮಾಹಿತಿಯಂತೆ, ಭೂಕಂಪದ ಕೇಂದ್ರಬಿಂದು ಅಲಾಸ್ಕಾದ ರಾಜಧಾನಿ ಜುನೌನಿಂದ ಉತ್ತರಪಶ್ಚಿಮಕ್ಕೆ ಸುಮಾರು 370 ಕಿಲೋಮೀಟರ್ ಹಾಗೂ ಕೆನಡಾದ ವೈಟ್‌ಹಾರ್ಸ್ ನಗರದಿಂದ ಪಶ್ಚಿಮಕ್ಕೆ 250 ಕಿಲೋಮೀಟರ್ ದೂರದಲ್ಲಿ ದಾಖಲಾಗಿದೆ.
ಭೂಕಂಪದ ತೀವ್ರತೆ ಹೆಚ್ಚಿದ್ದರೂ, ಈವರೆಗೆ ಯಾವುದೇ ಜೀವಹಾನಿ ಅಥವಾ ಭಾರಿ ಆಸ್ತಿನಷ್ಟದ ವರದಿ ಬಂದಿಲ್ಲ ಎಂಬುದು ಅಧಿಕಾರಿಗಳು ತಿಳಿದಿದ್ದಾರೆ. ಅಲ್ಲದೆ, ಈ ಕಂಪನದಿಂದ ಸುನಾಮಿ ಅಪಾಯ ಇಲ್ಲ ಎಂದು ಕೂಡ ಸ್ಪಷ್ಟನೆ ನೀಡಲಾಗಿದೆ. ಭೂಕಂಪದ ಬಳಿಕ ಅಲಾಸ್ಕಾ ಮತ್ತು ಉತ್ತರ ಕೆನಡಾದ ಹಲವೆಡೆ ಜನರು ಮನೆಗಳಿಂದ ಹೊರಬಂದು ಭಯದಿಂದ ಕ್ಷಣಕಾಲ ಗೊಂದಲಕ್ಕೆ ಒಳಗಾಗಿದ್ದಾರೆ.

