Sunday, December 7, 2025

ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡ್ತಿದ್ದಂಗೆ ಕುಸಿದು ಬಿತ್ತು ಛಾವಣಿ: 25ಕ್ಕೂ ಹೆಚ್ಚು ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆ ಚುರಾ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮದುವೆ ಸಮಾರಂಭವೊಂದು ಕ್ಷಣಾರ್ಧದಲ್ಲಿ ಆತಂಕಕ್ಕೆ ಸಾಕ್ಷಿಯಾಗಿದೆ. ಜುಂಗ್ರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಹ್ವಾ ಗ್ರಾಮದಲ್ಲಿ ಪಾರಂಪರಿಕ ಶೈಲಿಯ ಮಣ್ಣಿನ ಮನೆಯಲ್ಲಿ ನಡೆದ ವಿವಾಹದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.

ಸಂಜೆ ವೇಳೆ ಸಂಭ್ರಮಾಚರಣೆಯ ಭಾಗವಾಗಿ ಮನೆಯ ಛಾವಣಿಯ ಮೇಲೆ ಸಂಬಂಧಿಕರು ಹಾಗೂ ಸ್ನೇಹಿತರು ಸೇರಿ ನೃತ್ಯ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಛಾವಣಿಯ ದೊಡ್ಡ ಭಾಗ ಕುಸಿದು ಬಿದ್ದಿದೆ. ಏಕಾಏಕಿ ಸಂಭವಿಸಿದ ಕುಸಿತದಿಂದ ಸುಮಾರು 25ಕ್ಕೂ ಹೆಚ್ಚು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡು ಗಾಯಗೊಂಡಿದ್ದಾರೆ.

ಘಟನೆಯ ಬಳಿಕ ಸ್ಥಳದಲ್ಲಿ ಗೊಂದಲ ಮತ್ತು ಭಯದ ವಾತಾವರಣ ನಿರ್ಮಾಣವಾದರೂ, ಗ್ರಾಮಸ್ಥರು ತಕ್ಷಣ ಧೈರ್ಯ ಪ್ರದರ್ಶಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಕೈಗೆ ಲಭ್ಯವಿದ್ದ ಸಾಧನಗಳ ಮೂಲಕ ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿದ್ದವರನ್ನು ಒಂದೊಂದಾಗಿ ಹೊರತರಲಾಯಿತು.

ಗಾಯಾಳುಗಳನ್ನು ತಕ್ಷಣವೇ ಟೀಸಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಹುತೇಕ ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಾರಿಗೂ ಗಂಭೀರ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

error: Content is protected !!