Wednesday, December 10, 2025

ಆನ್ ಲೈನ್ ಗೇಮ್ ಗೆ ಮತ್ತೊಂದು ಬಲಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆನ್ ಲೈನ್ ಗೇಮ್ ಗೆ ಮತ್ತೊಂದು ಬಲಿಯಾಗಿದ್ದು, ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುಕೊಂಡುಕೊಂಡು ಬಸವರಾಜ ಸಕ್ರಪ್ಪನ್ನವರ್ (28) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಸವರಾಜ್ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡಿದ್ದ.

ಫೈನಾನ್ಸ್ ಕಂಪನಿಗೆ ನೀಡಬೇಕಿದ್ದ 3 ಲಕ್ಷ ರೂ.ಹಣವನ್ನು ಆನ್ ಲೈನ್ ಗೇಮ್ ಗೆ ಬಳಸಿಕೊಂಡಿದ್ದ. ಫೈನಾನ್ಸ್ ಕಂಪನಿ ಮಾಲೀಕನಿಗೆ ಹಣ ನೀಡಲು ಆಗದೆ ನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಗರಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!