ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆದ್ದು ಸರಣಿ ತನ್ನದಾಗಿಸಿಗೊಂಡಿದ್ದು,ಈ ಬಾರಿ ಟೀಮ್ ಇಂಡಿಯಾದ ಹಿರಿಯ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎರಡು ಶತಕ ಮತ್ತು ಒಂದು ಅರ್ಧಶತಕ ಗಳಿಸುವ ಮೂಲಕ ಕೊಹ್ಲಿ ತಮ್ಮ ಫಾರ್ಮ್ ಅನ್ನು ಮರುಕಳಿಸಿದರು.
ಇದೀಗ ಮ್ಯಾಚ್ ಮುಗಿದು ಬಳಿಕ ಕೊಹ್ಲಿ ವಿಶಾಖಪಟ್ಟಣದಲ್ಲಿರುವ ಸಿಂಹಾಚಲಂ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಭಾನುವಾರ ಕೊಹ್ಲಿ ಏಕಾಂಗಿಯಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ವರಾಹ ಲಕ್ಷ್ಮಿ ನರಸಿಂಹನಿಗೆ ಪ್ರಾರ್ಥನೆ ಸಲ್ಲಿಸಿ, ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ವೇಳೆ ದೇವಳದ ವತಿಯಿಂದ ಕೊಹ್ಲಿಯನ್ನು ಬರಮಾಡಿಕೊಳ್ಳಲಾಯಿತು. ಮತ್ತು ಗೌರವಿಸಲಾಯಿತು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಕಷ್ಟ ಅನುಭವಿಸಿದ್ದರು. ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು ತಮ್ಮ ಲಯ ಕಂಡುಕೊಂಡರು. ಆ ಬಳಿಕ ಸರಣಿಯಲ್ಲಿ ಒಟ್ಟು 300 ಪ್ಲಸ್ ರನ್ ಕಲೆಹಾಕಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸರಣಿ ಮುಗಿಸಿ ವಿಶ್ರಾಂತಿಯಲ್ಲಿರುವ ಕೊಹ್ಲಿ, ಡಿಸೆಂಬರ್ 24ರಂದು ಆರಂಭವಾಗುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲಿದ್ದಾರೆ.

