Monday, December 8, 2025

ತಂದೆಯನ್ನೇ ತುಳಿದು ಕೊಂದ ಆನೆಗೆ ಹಣ್ಣು ನೀಡಿ, ಆಶೀರ್ವಾದ ಪಡೆದ ಮಕ್ಕಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿನ ತಿರುಚೆಂದುರು ದೇವಸ್ಥಾನದಲ್ಲಿ ಮಾವುತನನ್ನೇ ಕೊಂದು ಹಾಕಿದ್ದ ಆನೆಯನ್ನು ವರ್ಷದ ಬಳಿಕ ಅದೇ ಮಾವುತನ ಮಕ್ಕಳು ಭೇಟಿಯಾಗಿ ಪ್ರೀತಿಯಿಂದ ಹಣ್ಣು ನೀಡಿ, ಆಶೀರ್ವಾದ ಪಡೆದುಕೊಂಡ ಮನಕಲಕುವ ಘಟನೆ ಇಂದು ನಡೆಯಿತು.

ಇಲ್ಲಿನ ಪ್ರಸಿದ್ಧ ತಿರುಚೆಂದುರು ಸುಬ್ರಮಣ್ಯ ಸ್ವಾಮಿ ದೇಗುಲದ ಹೆಣ್ಣಾನೆ ದೇವನೈ. ದಶಕಗಳಿಗೂ ಹೆಚ್ಚು ಕಾಲದಿಂದ ದೇಗುಲದ ರಾಜಗೋಪುರಂ ಪ್ರದೇಶದಲ್ಲಿದ್ದು, ಬರುವ ಭಕ್ತರನ್ನು ಆಶೀರ್ವದಿಸುತ್ತಾ, ದೇಗುಲದ ಉತ್ಸವ, ಹಬ್ಬ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಿತ್ತು.

2024ರ ನವೆಂಬರ್​ 18ರಂದು ಮಧ್ಯಾಹ್ನ ಎಂದಿನಂತೆ ದೇಗುಲದಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಬಹುದೊಡ್ಡ ದುರಂತವೇ ಘಟಿಸಿ ಹೋಗಿತ್ತು. ಆನೆ ದೇವನೈ ತನ್ನ ಆರೈಕೆ ಮಾಡುತ್ತಿದ್ದ ಮಾವುತ ಉದಯಕುಮಾರ್​ ಮತ್ತು ಅವರ ಸಂಬಂಧಿ ಶಿಶುಪಾಲನ್ ಎಂಬವರ ಮೇಲೆ ತನ್ನ ಕೋಪತಾಪ ತೋರಿಸಿತ್ತು. ಇಬ್ಬರನ್ನೂ ತುಳಿದು ಗಂಭೀರವಾಗಿ ಗಾಯಗೊಳಿಸಿತ್ತು. ತಕ್ಷಣವೇ ಇವರಿಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಿ ಇಬ್ಬರೂ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದರು. ​

2006ರಿಂದಲೂ ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿದ್ದ ದೇವನೈ, 18 ವರ್ಷಗಳಲ್ಲಿ ಎಂದೂ ಆ ರೀತಿಯ ಕೋಪ ತೋರಿದವಳಲ್ಲ. ಆದರೆ, ಕಳೆದ ವರ್ಷ ಆಕೆ ಇಬ್ಬರ ಸಾವಿಗೆ ಕಾರಣಳಾದಳು. ಇದು ಅಲ್ಲಿನ ಸಿಬ್ಬಂದಿಯಲ್ಲೂ ದಿಗ್ಬ್ರಮೆ ಮೂಡಿಸಿತ್ತು.

error: Content is protected !!