ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನಲ್ಲಿ ಮತ್ತೆ ಭೂಮಿ ಕಂಪಿಸಿದೆ. 7.6 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಸ್ಥಳೀಯ ಕಾಲಮಾನದಂತೆ ಸುಮಾರು 7.45ಕ್ಕೆ ಭೂಮಿ ಕಂಪಿಸಿದೆ. ಜಪಾನ್‌ನ ಅಮೋರಿ ಪ್ರಾಂತ್ಯದ ಮಿಸಾವಾದಿಂದ ಪೂರ್ವ-ಈಶಾನ್ಯಕ್ಕೆ 84 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಭೂಮಿಯ 53.1 ಕಿ.ಮೀ ಆಳದಲ್ಲಿ ಈ ಭೂಕಂಪ ದಾಖಲಾಗಿದೆ. ಉತ್ತರ ಜಪಾನ್‌ನ ಮಿಸಾವಾ ನಗರದ ಪೂರ್ವ-ಈಶಾನ್ಯಕ್ಕೆ 73 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದು ಇದ್ದು. ಪ್ರಬಲ ಭೂಕಂಪನದಿಂದ ಅಮೋರಿ ಮತ್ತು ಹೊಕ್ಕೈಡೊ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಈ ವರ್ಷದ ಜುಲೈನಲ್ಲಿ, ನೈಋತ್ಯ ಜಪಾನ್‌ನಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬಳಿಕ ಅಕ್ಟೋಬರ್ 4ರಂದು ಮತ್ತೆ ಭೂಮಿ ಕಂಪಿಸಿತ್ತು. ಈ ಭೂಕಂಪನದಿಂದ ಯಾವುದೇ ಹಾನಿ ಅಥವಾ ಸಾವು ನೋವುಗಳ ಬಗ್ಗೆ ವರದಿಯಾಗಿರಲಿಲ್ಲ, ಆದ್ರೆ ಜಪಾನ್‌ನ ಭೂಕಂಪನ ಇತಿಹಾಸವನ್ನ ಗಮನಿಸಿದರೆ ಇಂತಹ ಘಟನೆಗಳು ಗಮನಾರ್ಹವಾಗಿವೆ. ಜಪಾನ್‌ನಲ್ಲಿ ಭೂಕಂಪನ ಮತ್ತು ಜ್ವಾಲಾಮುಖಿಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತದೆ. ಆದ್ರೆ ಕೆಲವೊಮ್ಮ ಇವು ವಿನಾಶಕಾರಿ ಭೂಕಂಪನಗಳಾಗಿ ಪರಿವರ್ತನೆಗೊಂಡು ಸಾವು ನೋವುಗಳಿಗೆ ಸಾಕ್ಷಿಯಾಗಿವೆ.

