ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಿಯ ಮೇಲ್ಮೈ ಪ್ರಧಾನವಾಗಿ ನೀರಿನಿಂದ ಆವರಿಸಿದ್ದರೂ, ಇರಾನ್ನಲ್ಲಿ ಇರುವುದು ಕೇವಲ 3% ಮಾತ್ರ ಶುದ್ಧ ನೀರು. ಶತ ಕೋಟಿಗೂ ಹೆಚ್ಚು ಜನರು ನಿಯಮಿತವಾಗಿ ನೀರನ್ನ ಹೊಂದಿರುವುದಿಲ್ಲ ಮತ್ತು 2.7 ಶತಕೋಟಿ ಜನರು ವಾರ್ಷಿಕವಾಗಿ ಕನಿಷ್ಠ ಒಂದು ತಿಂಗಳ ಕಾಲ ನೀರಿನ ಕೊರತೆಯನ್ನು ಅನುಭವಿಸುತ್ತಿದ್ದಾರೆ ಅನ್ನೋದನ್ನ ಕಳೆದ ವರ್ಷ ತಜ್ಞರ ಸಮಿತಿಯ ವರದಿಯೊಂದು ಬಹಿರಂಗಪಡಿಸಿತ್ತು. ಇದರಿಂದಾಗಿ ತನ್ನ ರಾಜಧಾನಿಯನ್ನೇ ಬದಲಾಯಿಸಲು ಇರಾನ್ ತೀರ್ಮಾನಿಸಿದೆ.
ವರದಿಗಳ ಪ್ರಕಾರ, ಪ್ರಪಂಚದಾದ್ಯಂತದ ಅತ್ಯಂತ ಜನಪ್ರಿಯ ನಗರಗಳೇ ಕುಡಿಯುವ ನೀರಿನ ಕೊರತೆಯ ಅಪಾಯ ಎದುರಿಸುತ್ತಿವೆ. ಕುಡಿಯುವ ನೀರಿನ ಕೊರತೆಯು ಈ ಪ್ರಮುಖ ನಗರಗಳಲ್ಲಿಯೂ ಇದೆ ಎನ್ನುವುದು ಗಮನಾರ್ಹ ಸಂಗತಿ. ಹವಾಮಾನ ಬದಲಾವಣೆ, ಮಾನವನ ಚಟುವಟಿಕೆಗಳು ಮತ್ತು ಜನಸಂಖ್ಯೆಯ ಬೆಳವಣಿಗೆಯಿಂದಾಗಿ 2030ರ ವೇಳೆಗೆ ಜಾಗತಿಕ ಸಿಹಿನೀರಿನ ಪೂರೈಕೆಯಲ್ಲಿ 40% ಕೊರತೆ ಉಂಟಾಗುತ್ತದೆ ಎಂದು ವಿಶ್ವಸಂಸ್ಥೆಯ ಸಹಯೋಗದ ಬೆಂಬಲಿತ ಸಂಸ್ಥೆ ಮುನ್ಸೂಚನೆ ನೀಡಿವೆ.
ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಂತಹ ಮಹಾ ನಗರವೂ ಸಹ ನೀರಿನ ಕೊರತೆ ಅನುಭವಿಸುತ್ತಿರುವ ಪ್ರಮುಖ ದೇಶಗಳ ನಗರ ಪಟ್ಟಿಯಲ್ಲಿ ಸೇರಿಕೊಂಡಿದೆ. 2017 ಮತ್ತು 2018 ರಲ್ಲಿ ನೀರಿನ ಪ್ರಮಾಣವು 14% ಕ್ಕಿಂತಲೂ ಕಡಿಮೆಗೆ ಇಳಿದಾಗ ನಗರ ತೀವ್ರವಾದ ಅಭಾವ ಎದುರಿಸಿತ್ತು. ಬೇಸಿಗೆಯ ಹೊರತಾಗಿ ಇಲ್ಲಿ ನೀರಿನ ಮಟ್ಟಗಳು ಈಗ 50% ರಷ್ಟಿದ್ದರೂ, ವಿಶೇಷವಾಗಿ ಶುಷ್ಕ ಋತುವಿನ ಸಮೀಪಿಸುತ್ತಿರುವಂತೆ ಇದು ಸಾಕಾಗುವುದಿಲ್ಲ. ಕಾಬೂಲ್‌ನಲ್ಲೂ ಕೂಡ ನೀರಿಗೆ ಹಾಹಾಕಾರ ಶುರುವಾಗಿದ್ದು, ಮುಂದಿನ 5 ವರ್ಷಗಳಲ್ಲಿ ನೀರೇ ಇಲ್ಲದೇ ಭೂಮಿ ಒಣಗಿಹೋಗುತ್ತದೆ ಎನ್ನುತ್ತಿವೆ ವರದಿಗಳು. ಇದೀಗ ನೀರಿನ ಕೊರತೆ ಎದುರಿಸುತ್ತಿರುವ ದೇಶಗಳ ಸಾಲಿಗೆ ಇರಾನ್ ಕೂಡ ಸೇರಿಕೊಂಡಿದೆ.
ನೀರಿನ ಕೊರತೆ ಮತ್ತು ಭದ್ರತಾ ಆತಂಕದಿಂದಾಗಿ ಇರಾನ್ ದೇಶವು ಈಗ ತನ್ನ ರಾಜಧಾನಿಯನ್ನ ಸ್ಥಳಾಂತರಿಸಲು ಸಿದ್ಧತೆ ನಡೆಸಿದೆ. ಶೀಘ್ರದಲ್ಲೇ ಈ ಕುರಿತಾಗಿ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ. ಇತ್ತೀಚಿನ ಭಾಷಣವೊಂದರಲ್ಲಿ ಮಾತನಾಡಿದ್ದ ಟೆಹ್ರಾನ್ ಅಧ್ಯಕ್ಷ ಮಸೌದ್ ಪಜೇಶ್ಕಿಯಾನ್, ಪ್ರಸ್ತುತ 1.5 ಕೋಟಿ ಜನರಿಗೆ ನೆಲೆಯಾಗಿರುವ ಟೆಹ್ರಾನ್ ಇರಾನ್ ರಾಜಧಾನಿಯಾಗಿದೆ. ಇದನ್ನ ಶೀಘ್ರದಲ್ಲೇ ಸ್ಥಳಾತರಿಸಬಹುದು.
ಇರಾನ್ನಲ್ಲಿ ನೀರಿಲ್ಲ, ರಾಜಧಾನಿಯನ್ನೇ ಸ್ಥಳಾಂತರಿಸಲು ಮುಂದಾದ ದೇಶ

