ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಗೆ ತೆರೆ ಎಳೆಯುವಂತೆ ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಇಂದು ಆರಂಭವಾಗುತ್ತಿದೆ. ಬಾರಾಬತಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಚುಟುಕು ಕ್ರಿಕೆಟ್‌ಗೆ ಹೊಸ ಸಂಭ್ರಮವನ್ನು ತುಂಬಲಿದೆ. ಆದರೆ ಈ ಸರಣಿ ಹಲವರ ಅನುಪಸ್ಥಿತಿ ಕಾರಣದಿಂದಲೂ ಗಮನ ಸೆಳೆಯುತ್ತಿದೆ.
ಇತ್ತೀಚೆಗೆ ನಡೆದ ಏಕದಿನ ಸರಣಿಯಲ್ಲಿ ಮಿಂಚಿದ್ದ ಹಲವು ಪ್ರಮುಖ ಆಟಗಾರರು ಈ ಬಾರಿ ಟಿ20 ತಂಡಗಳಲ್ಲಿ ಸ್ಥಾನ ಪಡೆಯದೇ ಹೊರಗುಳಿದಿದ್ದಾರೆ. ಭಾರತದ ಪರ ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಕೆಲ ಪರಿಚಿತ ಹೆಸರುಗಳು ಟಿ20 ತಂಡದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಇಲ್ಲದಿರುವುದು ಕೂಡ ತಂಡದ ಸಂಯೋಜನೆಗೆ ಹೊಸ ರೂಪ ನೀಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಯುವ ಮತ್ತು ಅನುಭವಿ ಆಟಗಾರರ ಸಂಯೋಜನೆಯೊಂದಿಗೆ ಭಾರತ ಕಣಕ್ಕಿಳಿಯಲಿದೆ.
ಇತ್ತ ಸೌತ್ ಆಫ್ರಿಕಾ ತಂಡದಲ್ಲಿಯೂ ಬದಲಾವಣೆಗಳಿವೆ. ಏಕದಿನ ಸರಣಿಯ ನಾಯಕ ಟೆಂಬಾ ಬವುಮಾ ಟಿ20 ತಂಡದಿಂದ ಹೊರಗುಳಿದಿದ್ದು, ಐಡನ್ ಮಾರ್ಕ್ರಾಮ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯ ಮತ್ತು ವಿಶ್ರಾಂತಿ ಕಾರಣಗಳಿಂದ ಕೆಲ ಆಟಗಾರರಿಗೆ ಅವಕಾಶ ತಪ್ಪಿದೆ.
ಕಟಕ್‌ನ ಆರಂಭಿಕ ಪಂದ್ಯ ನಂತರ ಚಂಡೀಗಢ, ಧರ್ಮಶಾಲಾ, ಲಕ್ನೋ ಮತ್ತು ಅಹಮದಾಬಾದ್‌ನಲ್ಲಿ ಸರಣಿ ಮುಂದುವರಿಯಲಿದೆ.

