ಹಣ್ಣು ಕತ್ತರಿಸಿದ ತಕ್ಷಣ ಅದರ ಬಣ್ಣ ಬದಲಾಗಿದ್ರೆ, ಬಹುತೇಕ ಜನರಿಗೆ “ಇದು ಹಾಳಾಯಿತಾ?” ಅನ್ನೋ ಅನುಮಾನ ಬರುತ್ತದೆ. ವಿಶೇಷವಾಗಿ ಸೇಬು ಹಣ್ಣಿನ ತುಂಡುಗಳು ಕೆಲ ನಿಮಿಷಗಳಲ್ಲಿ ಕಂದು ಬಣ್ಣಕ್ಕೆ ತಿರುಗಿಬಿಡುತ್ತವೆ. ಆದ್ರೆ ಇದು ಹಾಳಾಗಿರುವ ಲಕ್ಷಣವಲ್ಲ, ಸಹಜವಾದ ವೈಜ್ಞಾನಿಕ ಪ್ರಕ್ರಿಯೆ.
ಸೇಬಿನೊಳಗೆ ಪಾಲಿಫಿನಾಲ್ ಆಕ್ಸಿಡೇಸ್ ಎಂಬ ಎನ್ಜೈಮ್ ಇರುತ್ತದೆ. ಸೇಬು ಕತ್ತರಿಸಿದಾಗ, ಅದರ ಒಳಭಾಗ ಗಾಳಿಯ ಆಕ್ಸಿಜನ್‌ಗೆ ತಗುಲುತ್ತದೆ. ಈ ಎನ್ಜೈಮ್ ಮತ್ತು ಆಕ್ಸಿಜನ್ ನಡುವಿನ ಪ್ರತಿಕ್ರಿಯೆಯಿಂದ ಆಕ್ಸಿಡೇಷನ್ ಪ್ರಕ್ರಿಯೆ ಶುರುವಾಗುತ್ತದೆ. ಇದರ ಪರಿಣಾಮವಾಗಿ ಸೇಬು ಕಂದು ಬಣ್ಣಕ್ಕೆ ತಿರುಗುತ್ತದೆ. ಆದರೆ ರುಚಿ ಅಥವಾ ಪೌಷ್ಟಿಕತೆಯಲ್ಲಿ ತಕ್ಷಣದ ಬದಲಾವಣೆ ಆಗುವುದಿಲ್ಲ.
ಕಂದು ಬಣ್ಣಕ್ಕೆ ತಿರುಗೋದನ್ನು ತಡೆಯುವ ಸುಲಭ ವಿಧಾನಗಳು ಇಲ್ಲಿವೆ:
- ಕತ್ತರಿಸಿದ ಸೇಬಿನ ಮೇಲೆ ನಿಂಬೆಹಣ್ಣಿನ ರಸ ಅಥವಾ ಕಿತ್ತಳೆಹಣ್ಣಿನ ರಸ ಹಚ್ಚುವುದು
- ಸ್ವಲ್ಪ ಉಪ್ಪು ಹಾಕಿದ ತಣ್ಣೀರು ಅಥವಾ ಸಾಮಾನ್ಯ ನೀರಿನಲ್ಲಿ ಕೆಲ ನಿಮಿಷ ನೆನೆಸಿಟ್ಟು ಹೊರತೆಗೆಯುವುದು
- ಗಾಳಿಗೆ ನೇರ ಸಂಪರ್ಕ ಕಡಿಮೆಯಾಗುವಂತೆ ಮುಚ್ಚಿದ ಡಬ್ಬಿಯಲ್ಲಿ ಇಡುವುದು
- ಸೇಬು ಕತ್ತರಿಸಿದ ನಂತರ ತಕ್ಷಣ ಉಪಯೋಗಿಸುವುದು

