ಹೊಸದಿಗಂತ ಡಿಜಿಟಲ್ ಡೆಸ್ಕ್:
ಜರ್ಮನಿಯ ಮೆಟ್ರೋವೊಂದರಲ್ಲಿ ಫೇಮಸ್ ನಟಿ, ಆಕೆ ಪಕ್ಕದಲ್ಲೊಬ್ಬ ಭಾರತೀಯ ಯುವಕ ಕುಳಿತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಪಕ್ಕದಲ್ಲಿ ಕೂತಿದ್ದು ಫೇಮಸ್ ನಟಿ ಎಂದು ತಿಳಿಯದೇ ಮುಗ್ಧವಾಗಿ ಕೂತಿದ್ದ ಭಾರತೀಯ ಇದೀಗ ಜರ್ಮನಿಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದಾರೆ.
ಆಕೆಗೂ ಕೆಲಸಕ್ಕೂ ಏನು ಸಂಬಂಧ? ಇಲ್ಲಿದೆ ಕಂಪ್ಲೀಟ್ ಸ್ಟೋರಿ..
ಗೋಟೆಡ್ ಶೋ ಗೇಮ್ ಆಫ್ ಥ್ರೋನ್ಸ್‌ನ ನಟಿ ಮೇಝಿ ವಿಲಿಯಮ್ಸ್ ಮೆಟ್ರೋದಲ್ಲಿ ಬಭಾರತೀಯ ಯುವಕನ ಪಕ್ಕ ಕುಳಿತು ಪ್ರಯಾಣ ಬೆಳೆಸಿದ್ದಾರೆ. ಭಾರತೀಯ ಯುವಕ ಯಾವುದೇ ರಿಯಾಕ್ಷನ್ ನೀಡಿಲ್ಲ. ಈ ವಿಡಿಯೋ ವೈರಲ್ ಆಗಿದ್ದು, ಎಲ್ಲರೂ ಆ ಯುವಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ನಂತರ ಮಾಧ್ಯಮವೊಂದು ಆ ಯುವಕನನ್ನು ಪತ್ತೆ ಮಾಡಿ ಪ್ರಶ್ನೆ ಮಾಡಿದೆ, ಅಂತಹ ದೊಡ್ಡನಟಿಯೇ ನಿಮ್ಮ ಪಕ್ಕ ಕೂತಿದ್ರೂ ಒಂದು ರಿಯಾಕ್ಷನ್ ಕೊಡದೇ ಯಾಕೆ ಇದ್ರಿ ಎಂದಿದ್ದಾರೆ.
ಅದಕ್ಕೆ ಯುವಕ ಪ್ರಾಮಾಣಿಕ ಉತ್ತರ ನೀಡಿದ್ದು, ಜನರ ಮನಸ್ಸನ್ನು ಗೆದ್ದಿದ್ದಾರೆ. ಸರ್ ನನಗೆ ನೂರಾರು ಸಮಸ್ಯೆ ಇದೆ. ಜರ್ಮನಿಯಲ್ಲಿ ಇರೋದಕ್ಕೆ ಪರ್ಮಿಷನ್ ಇಲ್ಲ. ಜೇಬಿನಲ್ಲಿ ದುಡ್ಡಿಲ್ಲ. ನಿತ್ಯ ಟಿಕೆಟ್ ಇಲ್ಲದೆ ರೈಲಿನಲ್ಲಿ ಓಡಾಡ್ತಿದ್ದೇನೆ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಪಕ್ಕ ಕೂತವರನ್ನು ಯಾಕೆ ನೋಡಲಿ ಎಂದಿದ್ದಾರೆ.
ಪ್ರಾಮಾಣಿಕ ಉತ್ತರವನ್ನು ಮೆಚ್ಚಿದ ಸಂಸ್ಥೆಯೊಂದು ಯುವಕನಿಗೆ ಕೆಲಸ ನೀಡಿದೆ. ಪೋಸ್ಟ್ ಮ್ಯಾನ್ ಕೆಲಸ ಇದಾಗಿದ್ದು, ಉತ್ತಮ ಸಂಬಳ ಹಾಗೂ ಜರ್ಮನಿಯಲ್ಲಿ ಇರೋದಕ್ಕೆ ಪರ್ಮಿಷನ್ ಸಿಕ್ಕಿದೆ.

