Wednesday, December 10, 2025

ಎಸ್ಐಆರ್ ಗೆ ಸಹಕಾರ ನೀಡದ ರಾಜ್ಯಗಳಿಗೆ ತರಾಟೆ: BLO ಗಳಿಗೆ ಬೆದರಿಕೆ ಹಾಕಿದ್ರೆ ಗಮನಕ್ಕೆ ತನ್ನಿ ಎಂದ ಸುಪ್ರೀಂ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದ ಹಲವು ರಾಜ್ಯಗಳಲ್ಲಿ ಭಾರತೀಯ ಚುನಾವಣಾ ಆಯೋಗ(ಇಸಿಐ) ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ನಡೆಸುತ್ತಿದ್ದು, ಈ ನಡುವೆ ಎಸ್ಐಆರ್ ಗೆ “ಸಹಕಾರ ನೀಡದ” ಕೆಲವು ರಾಜ್ಯ ಸರ್ಕಾರಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಬಿಎಲ್‌ಒಗಳು ಬೆದರಿಕೆ ಎದುರಿಸುತ್ತಿರುವ ಅಥವಾ ಅಧಿಕಾರಿಗಳು ಎಸ್‌ಐಆರ್ ಪ್ರಕ್ರಿಯೆಯನ್ನು ಕೈಗೊಳ್ಳುವಲ್ಲಿ ಅಡೆತಡೆಗಳನ್ನು ಎದುರಿಸುವ ಯಾವುದೇ ಸಂದರ್ಭವನ್ನು ತಕ್ಷಣವೇ ತನ್ನ ಗಮನಕ್ಕೆ ತರುವಂತೆ ಇಸಿಐಗೆ ನಿರ್ದೇಶಿಸಿದೆ.

ಬೂತ್ ಮಟ್ಟದ ಅಧಿಕಾರಿಗಳಿಗೆ(ಬಿಎಲ್‌ಒ) ಬೆದರಿಕೆ ಹಾಕಲಾಗುತ್ತಿದೆ ಮತ್ತು ಎಸ್ಐಆರ್ ಗೆ ಅಡ್ಡಿಪಡಿಸಲಾಗುತ್ತಿದೆ ಎಂಬ ವರದಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ಗಂಭೀರವಾಗಿ ಪರಿಗಣಿಸಿದೆ. ಅಂತಹ ವಿಷಯಗಳನ್ನು ನಮ್ಮ ಗಮನಕ್ಕೆ ತಂದರೆ, ನಾವು ಸೂಕ್ತ ಆದೇಶಗಳನ್ನು ರವಾನಿಸುತ್ತೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣಾ ಪ್ರಕ್ರಿಯೆ ಸುಗಮ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಇಸಿಐಗೆ ಸೂಚಿಸಿದೆ.

SIR ಪ್ರಕ್ರಿಯೆಯಲ್ಲಿ ತೊಡಗಿರುವ BLO ಗಳು ಮತ್ತು ಇತರ ಸಿಬ್ಬಂದಿ ಎದುರಿಸುತ್ತಿರುವ ಬೆದರಿಕೆಗಳನ್ನು ತಡೆಯಲು ಅಗತ್ಯವಿರುವ ಎಲ್ಲಾ ಸಾಂವಿಧಾನಿಕ ಅಧಿಕಾರವನ್ನು ಚುನವಣಾ ಆಯೋಗ ಹೊಂದಿದೆ ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.

error: Content is protected !!