ಚಳಿಗಾಲ ಬಂತೆದರೆ ಸಾಕು ಚರ್ಮದ ಮೇಲೆ ಬಿಗಿತ, ಡ್ರೈ ಸ್ಕಿನ್, ಬಿಳಿ ಬಿಳಿ ಪದರಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಸಮಸ್ಯೆ. ಎಷ್ಟೇ ಕ್ರೀಮ್‌ಗಳನ್ನು ಬಳಸದರೂ ಡ್ರೈ ಸ್ಕಿನ್ ಸಮಸ್ಯೆ ಪದೇ ಪದೇ ಮರಳುತ್ತದೆ. ಇಂತಹ ಸಂದರ್ಭಗಳಲ್ಲಿ ಮನೆಯಲ್ಲೇ ಇರುವ ಸರಳ, ನೈಸರ್ಗಿಕ ಪರಿಹಾರವೇ ತೆಂಗಿನ ಹಾಲು. ಪ್ರಾಕೃತಿಕವಾಗಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನ ಹಾಲು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ಮರಳಿ ಕೊಡುತ್ತದೆ.
ಡ್ರೈ ಸ್ಕಿನ್ ಗೆ ತೆಂಗಿನ ಹಾಲು ಹೇಗೆ ಸಹಾಯ ಮಾಡುತ್ತದೆ?
- ತೆಂಗಿನ ಹಾಲಿನಲ್ಲಿ ಇರುವ ಆರೋಗ್ಯಕರ ಕೊಬ್ಬುಗಳು ಚರ್ಮದ ಆಂತರಿಕ ತೇವಾಂಶವನ್ನು ಕಾಪಾಡುತ್ತವೆ
- ವಿಟಮಿನ್ C ಮತ್ತು E ಚರ್ಮದ ಕಾಂತಿಯನ್ನು ಹೆಚ್ಚಿಸಿ ಒರಟುತನವನ್ನು ಕಡಿಮೆ ಮಾಡುತ್ತವೆ
- ಚಳಿ ಕಾರಣವಾಗುವ ಚರ್ಮದ ಉರಿಯನ್ನು ತಗ್ಗಿಸುತ್ತದೆ.
- ನಿಯಮಿತ ಬಳಕೆಯಿಂದ ಚರ್ಮ ಮೃದುವಾಗುತ್ತದೆ
- ರಾಸಾಯನಿಕವಿಲ್ಲದ ನೈಸರ್ಗಿಕ ಪರಿಹಾರವಾಗಿರುವುದರಿಂದ ಸೆನ್ಸಿಟಿವ್ ಚರ್ಮಕ್ಕೂ ಸುರಕ್ಷಿತ
ತೆಂಗಿನ ಹಾಲು ಬಳಕೆ ಹೇಗೆ?
ತೆಂಗಿನ ಹಾಲನ್ನು ಮುಖ ಅಥವಾ ದೇಹದ ಮೇಲೆ ಹಚ್ಚಿ 15 ನಿಮಿಷ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ 2–3 ಬಾರಿ ಮಾಡಿದರೆ ಚಳಿಗಾಲದ ಡ್ರೈ ಸ್ಕಿನ್ ಸಮಸ್ಯೆ ನಿಧಾನವಾಗಿ ಕಡಿಮೆಯಾಗುತ್ತದೆ.
ಚರ್ಮದ ಆರೈಕೆಗೆ ಕೆಲವೊಮ್ಮೆ ಸರಳ ಮನೆಮದ್ದುಗಳೇ ಅತ್ಯಂತ ಪರಿಣಾಮಕಾರಿ ಪರಿಹಾರವಾಗುತ್ತವೆ.

