Friday, December 12, 2025

ಎಲ್ಲ ಸರಿಯಾಗಿದೆ ಎಂದು ಹೇಳಿದಮೇಲೂ ಬೆಂಗಳೂರಿನಿಂದ 60ಕ್ಕೂ ಹೆಚ್ಚು ಇಂಡಿಗೋ ವಿಮಾನ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಿಸೆಂಬರ್ 9 ರಂದು ವಿಮಾನಯಾನ ಕಾರ್ಯಾಚರಣೆಗಳು ಮತ್ತೆ ಮೊದಲಿನಂತೆ ಆಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್ ಎಲ್ಬರ್ಸ್ ಹೇಳಿದ್ದರೂ, ಇಂಡಿಗೋ ಬುಧವಾರ 60ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ.

ಇಂಡಿಗೋ ಬುಧವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ 35 ಮತ್ತು ನಿರ್ಗಮಿಸುವ 26 ಸೇರಿದಂತೆ ಒಟ್ಟು 61 ವಿಮಾನಗಳನ್ನು ರದ್ದುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ, ಕೇಂದ್ರ ಸರ್ಕಾರವು ಇಂಡಿಗೋದ ಚಳಿಗಾಲದ ವಿಮಾನ ವೇಳಾಪಟ್ಟಿಯಲ್ಲಿ ಶೇ 10ರಷ್ಟು ಅಥವಾ ದಿನಕ್ಕೆ ಅನುಮೋದಿಸಲಾದ ಸುಮಾರು 2,200 ವಿಮಾನಗಳಲ್ಲಿ ಸುಮಾರು 220 ವಿಮಾನಗಳನ್ನು ಕಡಿತಗೊಳಿಸಿದ ನಂತರ, ಹೇಳಿಕೆ ಬಿಡುಗಡೆ ಮಾಡಿದ್ದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೀಟರ್ ಆಲ್ಬರ್ಸ್, ‘ಇಂಡಿಗೋ ಮತ್ತೆ ತನ್ನ ಕಾರ್ಯಾಚರಣೆ ಆರಂಭಿಸಿದೆ ಮತ್ತು ನಮ್ಮ ಕಾರ್ಯಾಚರಣೆಗಳು ಸ್ಥಿರವಾಗಿವೆ’ ಎಂದಿದ್ದರು.

‘ಲಕ್ಷಾಂತರ ಗ್ರಾಹಕರು ಈಗಾಗಲೇ ತಮ್ಮ ಪೂರ್ಣ ರೀಫಂಡ್ ಅನ್ನು ಪಡೆದಿದ್ದಾರೆ. ನಮ್ಮ ಇಡೀ ಇಂಡಿಗೋ ತಂಡವು ತುಂಬಾ ಶ್ರಮಿಸುತ್ತಿದೆ. ವಿಮಾನ ರದ್ದಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಪ್ರಯಾಣಿಕರನ್ನು ನೋಡಿಕೊಂಡಿದೆ. ಲಗೇಜ್ ಅನ್ನು ಸರಿಯಾದ ಮಾಲೀಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಅವರು ಹೇಳಿದ್ದರು.

error: Content is protected !!