ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಷ್ಟ್ರ ಜಾಗೃತಿಯ ಈ ಪವಿತ್ರ ಗೀತೆ ವಂದೇ ಮಾತರಂಗೆ ಈ ವರ್ಷ 150 ವರ್ಷಗಳು ತುಂಬುತ್ತಿದ್ದು, ಈ ಐತಿಹಾಸಿಕ ಸಂದರ್ಭದಲ್ಲಿ ಹಾಗೂ ಸನಾತನ ಸಂಸ್ಥೆಯ ರಾಷ್ಟ್ರ ಮತ್ತು ಧರ್ಮಕಾರ್ಯದ 25 ವರ್ಷಗಳು ಪೂರ್ಣಗೊಂಡಿರುವ ನಿಮಿತ್ತ, ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದೊಂದಿಗೆ ನಡೆಯುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ‘ವಂದೇ ಮಾತರಮ್’ ಕುರಿತ ಭವ್ಯ ಪ್ರದರ್ಶನ ಮತ್ತು ವಿಶೇಷ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಸನಾತನ ಸಂಸ್ಥೆಯ ವಕ್ತಾರರಾದ ಅಭಯ ವರ್ತಕ್ ಮಾಹಿತಿ ನೀಡಿದ್ದಾರೆ.
“‘ವಂದೇ ಮಾತರಮ್’ ಸಂಪೂರ್ಣ ಭಾರತವನ್ನು ರಾಷ್ಟ್ರಭಾವನೆಯ ಸೂತ್ರದಲ್ಲಿ ಸೇರಿಸಿದೆ. ಈ ಗೀತೆಯು ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿಯ ಮೂಲವಾಗಿ, ತ್ಯಾಗ ಮತ್ತು ರಾಷ್ಟ್ರನಿಷ್ಠೆಯ ಭಾವನೆಯನ್ನು ಜನಮಾನಸದಲ್ಲಿ ಜಾಗೃತಗೊಳಿಸಿತು. ಈ ಸ್ಫೂರ್ತಿಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಅವರು ಹೇಳಿದ್ದಾರೆ.
ವಿಶೇಷ ಆಕರ್ಷಣೆಗಳು:
- 1000 ಜನರ ಸಾಮೂಹಿಕ ಗಾಯನ: ‘ವಂದೇ ಮಾತರಮ್’ – ರಾಷ್ಟ್ರಭಾವನೆಯ ಮಹಾ ಅಭಿಯಾನ
- ಐತಿಹಾಸಿಕ ಚಲನಚಿತ್ರ ಪ್ರದರ್ಶನ: ‘ವಂದೇ ಮಾತರಮ್’ನ ಉಗಮ, ಹೋರಾಟದ ಕಥೆ ಮತ್ತು ರಾಷ್ಟ್ರನಿರ್ಮಾಣದಲ್ಲಿ ಕೊಡುಗೆ
- ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಮಾರ್ಗದರ್ಶನ : ‘ವಂದೇ ಮಾತರಮ್’ನ ಸಾಂಸ್ಕೃತಿಕ, ಐತಿಹಾಸಿಕ ಮತ್ತು ರಾಷ್ಟ್ರೀಯ ಮಹತ್ವದ ಕುರಿತು ಉಪನ್ಯಾಸ
- ಈ ಪ್ರದರ್ಶನದಲ್ಲಿ ಮಾತೃಭೂಮಿಯ ಮೇಲಿನ ಪ್ರೀತಿ, ರಾಷ್ಟ್ರಕ್ಕಾಗಿ ತ್ಯಾಗ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಭಾವನೆಯನ್ನು ಅನುಭವಾತ್ಮಕ ರೂಪದಲ್ಲಿ ಪ್ರಸ್ತುತಪಡಿಸಲಾಗುವುದು. ಸಮಸ್ತ ನಾಗರಿಕರಿಗೆ ಆಹ್ವಾನ
ಸನಾತನ ಸಂಸ್ಥೆಯ ವತಿಯಿಂದ ಸಮಸ್ತ ಹಿಂದೂ ಸಮಾಜ, ರಾಷ್ಟ್ರಭಕ್ತ ನಾಗರಿಕರು ಮತ್ತು ಯುವ ವರ್ಗಕ್ಕೆ ಈ ಸ್ಮರಣೀಯ ಪ್ರದರ್ಶನದಲ್ಲಿ ಭಾಗವಹಿಸಿ ‘ವಂದೇ ಮಾತರಮ್’ನ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಪರಂಪರೆಯನ್ನು ತಿಳಿದುಕೊಳ್ಳುವಂತೆ ವಿನಂತಿಸಲಾಗಿದೆ. - ಭಾಗವಹಿಸುವಾಗ ಸರ್ಕಾರಿ ಗುರುತಿನ ಚೀಟಿಯನ್ನು (ಐಡಿ ಪ್ರೂಫ್) ಜೊತೆಗೆ ತರುವುದು ಕಡ್ಡಾಯವಾಗಿದೆ.

