ಹೊಸದಿಗಂತ ಡಿಜಿಟಲ್ ಡೆಸ್ಕ್:
ಫಿಲಿಪೈನ್ಸ್‌ನ ಸೆಬುವಿನ ಮಾಂಡೌ ಸಿಟಿಯಲ್ಲಿ ಸಂಭವಿಸಿದ ಭಾರಿ ಕಟ್ಟಡ ಅಗ್ನಿ ಅವಘಡದಲ್ಲಿ, ಒಬ್ಬ ಮಹಿಳೆಯು ತಮ್ಮ ಸಾಕು ನಾಯಿಗಳ ಮೇಲಿದ್ದ ಅಪಾರ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಕಟ್ಟಡಕ್ಕೆ ಬೆಂಕಿ ವೇಗವಾಗಿ ಹಬ್ಬುತ್ತಿದ್ದರೂ, ತಮ್ಮ ಪ್ರಾಣದ ಹಂಗು ತೊರೆದು, ಆಕೆ ಧೈರ್ಯದಿಂದ ಒಳನುಗ್ಗಿ ತನ್ನ ಪ್ರೀತಿಯ ನಾಯಿಗಳನ್ನು ರಕ್ಷಿಸಿದ್ದಾರೆ.
ಸರಿಯಾದ ಸಮಯಕ್ಕೆ ನಿರ್ಧಾರ ಕೈಗೊಂಡಿದ್ದರೆ ಅವರು ಮೊದಲೇ ಸುರಕ್ಷಿತವಾಗಿ ಹೊರಬರಲು ಸಾಧ್ಯವಿತ್ತು. ಆದರೆ, ಆಕೆ ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಸಾಕುಪ್ರಾಣಿಗಳನ್ನು ಆದ್ಯತೆ ನೀಡಿದರು. ಬೆಂಕಿಯ ಭೀಕರ ಜ್ವಾಲೆಯ ಮಧ್ಯೆ ನುಗ್ಗಿ ಅವುಗಳನ್ನು ಹೊರತಂದ ಈ ಸಾಹಸಮಯ ಕಾರ್ಯವು, ಆಕೆಯ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇತ್ತು. ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ಪವಿತ್ರ ಬಂಧವು, ಈ ಭಯಾನಕ ಘಟನೆಯ ನಡುವೆಯೂ ಒಂದು ಆಶಾದಾಯಕ ಕಥೆಯಾಗಿ ಹೊರಹೊಮ್ಮಿದೆ.

