Sunday, December 21, 2025

CURLY HAIR | ಗುಂಗುರು ಕೂದಲಿನ ಹುಡುಗಿ ಜೀವನ ಸಂಗಾತಿಯಾಗಿ ಸಿಕ್ರೆ ನಿಮ್ಮಷ್ಟು ಅದೃಷ್ಟವಂತ ಇನ್ಯಾರೂ ಇಲ್ಲ!

ಅಸ್ಟ್ರಾಲಜಿ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ಗುಂಗುರು ಕೂದಲಿರುವ ಮಹಿಳೆಯರು ಅದೃಷ್ಟವಂತರು. ಹೋಗುವ ಮನೆಗಳಿಗೂ ಅವರು ಅದೃಷ್ಟ ತರುತ್ತಾರೆ.

ಅವರು ಸದಾ ಎನರ್ಜಿಟಿಕ್‌ ಆಗಿರುತ್ತಾರೆ. ಅವರು ಅತೀ ಸೂಕ್ಷ್ಮ ವ್ಯಕ್ತಿಗಳು ಹಾಗೂ ಅವರು ಅಂದುಕೊಂಡದ್ದೆಲ್ಲ ನಿಜ ಆಗುತ್ತದೆ.

ದೇವಿಯರ ಫೋಟೊಗಳನ್ನು ಗಮನಿಸಿದ್ದೀರಾ? ಹೆಚ್ಚು ದೇವರ ಫೋಟೊಗಳಲ್ಲಿ ದೇವಿಯ ತಲೆಗೂದಲು ಗುಂಗುರಾಗಿರುತ್ತದೆ.

ಏನೆಲ್ಲಾ ಗುಣಗಳಿವೆ ಇವರಲ್ಲಿ?

ಶುಕ್ರನಂತಹ ಶಕ್ತಿಶಾಲಿ ಗ್ರಹವು ಇವರನ್ನು ಆಳುತ್ತದೆ. ಇವರು ಸ್ವತಂತ್ರರು, ಉಲ್ಲಾಸಪ್ರಿಯರು, ಪ್ರೀತಿ ನೀಡುವವರು ಹಾಗೂ ಪಡೆಯುವವರು.

ಈ ಕೂದಲಿನವರಿಗೆ ಭಯ ಕಡಿಮೆ, ಯಾವುದೇ ಕೆಲಸಕ್ಕೆ ಮುನ್ನುಗ್ಗಲು ಕಾಯೋದಿಲ್ಲ. ನಿಸರ್ಗದ ಜೊತೆ ಒಡನಾಟ ಹೆಚ್ಚು

ಇವರನ್ನು ಕಟ್ಟಿಹಾಕೋಕೆ ಸಾಧ್ಯವಿಲ್ಲ. ಹೆಣ್ಣು ದೇವತೆಗಳ ಶಕ್ತಿ ಇವರೊಂದಿಗೆ ಇರುತ್ತದೆ. ಚಾಲೆಂಜ್‌ ಮಾಡುವ ಹಾಗೂ ಗೆಲ್ಲುವ ಗುಣ ಇವರದ್ದು.

ಇವರು ಯಾವುದಾದರೂ ಕೆಲಸವನ್ನು ಬೇಡ ಎಂದರೆ ಖಂಡಿತಾ ಮಾಡಬೇಡಿ. ಭವಿಷ್ಯವನ್ನು ಊಹಿಸುವ ಇವರ ಶಕ್ತಿ ಅದ್ಭುತವಾಗಿರುತ್ತದೆ.

error: Content is protected !!