ಬೆಳಿಗ್ಗೆ ಉಳಿದ ಇಡ್ಲಿಗಳನ್ನು ರುಚಿಕರವಾದ ಸ್ನ್ಯಾಕ್ ಆಗಿ ಮಾಡ್ಬೇಕಾ? ಹಾಗಾದ್ರೆ ಇಡ್ಲಿ ಮಂಚೂರಿಯನ್ ನಿಮಗೆ ಸೂಪರ್ ಆಯ್ಕೆ. ಸಿಹಿ–ಖಾರ ಮಿಕ್ಸ್‌ನ ರುಚಿ, ಹೊರಗೆ ಕ್ರಿಸ್ಪಿ ಮತ್ತು ಒಳಗೆ ಸಾಫ್ಟ್ ಟೆಕ್ಸ್ಚರ್… ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಇಷ್ಟಪಡುವ ಡಿಶ್ ಇದು. ಚಾಯ್ ಜೊತೆಗೆ ಸಂಜೆ ಸ್ನ್ಯಾಕ್ ಆಗಲಿ, ಪಾರ್ಟಿ ಸ್ಟಾರ್ಟರ್ ಆಗಲಿ ಈ ರೆಸಿಪಿ ಹಿಟ್!
ಬೇಕಾದ ಸಾಮಗ್ರಿಗಳು
ಇಡ್ಲಿ – 6
ಕಾರ್ನ್‌ಫ್ಲೋರ್ – 3 ಟೀ ಸ್ಪೂನ್
ಮೈದಾ – 2 ಟೀ ಸ್ಪೂನ್
ಮೆಣಸಿನ ಪುಡಿ – 1 ಟೀ ಸ್ಪೂನ್
ಸೋಯಾ ಸಾಸ್ – 1 ಟೀ ಸ್ಪೂನ್
ಟೊಮೆಟೊ ಸಾಸ್ – 1 ಟೀ ಸ್ಪೂನ್
ಚಿಲಿ ಸಾಸ್ – 1 ಟೀ ಸ್ಪೂನ್
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಕ್ಯಾಪ್ಸಿಕಂ – ½ ಕಪ್ (ಚೂರಿ)
ಈರುಳ್ಳಿ – ½ ಕಪ್ (ಚೂರಿ)
ಹಸಿಮೆಣಸಿನಕಾಯಿ – 2
ಶುಂಠಿ – ಸ್ವಲ್ಪ
ಕೊತ್ತಂಬರಿ – ಸ್ವಲ್ಪ
ಎಣ್ಣೆ – ಕರಿಯಲು
ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
ಇಡ್ಲಿಗಳನ್ನು ಸಣ್ಣ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ.
ಒಂದು ಬಟ್ಟಲಿನಲ್ಲಿ ಕಾರ್ನ್‌ಫ್ಲೋರ್, ಮೈದಾ, ಮೆಣಸಿನ ಪುಡಿ, ಸ್ವಲ್ಪ ಉಪ್ಪು ಹಾಕಿ ನೀರಿನಲ್ಲಿ ದಪ್ಪ ಬ್ಯಾಟರ್ ಮಾಡಿ. ಈ ಬ್ಯಾಟರ್‌ಗೆ ಇಡ್ಲಿ ತುಂಡುಗಳನ್ನು ಮಿಕ್ಸ್ ಮಾಡಿ, ಬಿಸಿ ಎಣ್ಣೆಯಲ್ಲಿ ಕ್ರಿಸ್ಪಿ ಆಗುವವರೆಗೆ ಕರಿಯಿರಿ.
ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಬಾಡಿಸಿ. ನಂತರ ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸಿನಕಾಯಿ ಹಾಕಿ 2–3 ನಿಮಿಷ ಹುರಿಯಿರಿ. ಸೋಯಾ ಸಾಸ್, ಟೊಮೆಟೊ ಸಾಸ್, ಚಿಲಿ ಸಾಸ್ ಮತ್ತು ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಈಗ ಕರಿದ ಇಡ್ಲಿ ತುಂಡುಗಳನ್ನು ಸೋಸ್ ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊತ್ತಂಬರಿ ಹಾಕಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ.

