Friday, December 12, 2025

WEIGHT LOSS | ತುಂಬಾ ಸ್ಟ್ರಗಲ್‌ ಮಾಡ್ಬೇಕಿಲ್ಲ, ಸಿಂಪಲ್‌ ಆದ ಟಿಪ್ಸ್‌ ಫಾಲೋ ಮಾಡಿ ತೂಕ ಇಳಿಸಿ

ತೂಕ ಇಳಿಸಬೇಕು ಅನ್ನೋ ವಿಚಾರ ನಿಮಗೆ ಕಬ್ಬಿಣದ ಕಡಲೆಯಂತಾಗಿದ್ಯಾ? ಸಾವಿರಾರು ಜನರ ಒಪಿನಿಯನ್‌ ಕೇಳೋದು, ನೂರಾರು ರೀಲ್ಸ್‌ ನೋಡೋದು ಇಂದೇ ಬಿಟ್ಟುಬಿಡಿ. ಯಾವುದಾದರೂ ಒಂದು ವಿಷಯದ ಬಗ್ಗೆ ಗಮನಹರಿಸಿ, ಒಬ್ಬರ ಮಾತನ್ನು ಮಾತ್ರ ಕೇಳಿ. ತೂಕ ಇಳಿಸೋದು ಸಿಂಪಲ್‌ ಬಟ್‌ ಒಂದೇ ರೊಟೀನ್‌ ಫಾಲೋ ಮಾಡೋದು, ಇಷ್ಟದ ಫುಡ್‌ ಕಣ್ಣೆದುರು ಬಂದಾಗ ಹೊಟ್ಟೆ ತುಂಬಾ ತಿನ್ನೋದು ಬಿಟ್ಟು ಕಂಟ್ರೋಲ್‌ ಮಾಡೋದು ಕಷ್ಟದ ವಿಷಯ…

ತೂಕ ಇಳಿಸೋಕೆ ರಿಯಲಿಸ್ಟಿಕ್‌ ಟಿಪ್ಸ್‌ ಇಲ್ಲಿದೆ..

ಹೆಚ್ಚೇನು ಬೇಡ ಸ್ವಾಮಿ, ನಿಮ್ಮ ಊಟದ ತಟ್ಟೆ ಬಗ್ಗೆ ನಿಗಾ ಇರಲಿ. ಮೂರು ಚಪಾತಿ ಬದಲು ಎರಡು ತಿನ್ನಿ, ಹೊಟ್ಟೆ ತುಂಬೋದಿಲ್ಲ ಅಂದ್ರೆ ಪಲ್ಯ ಅಥವಾ ತರಕಾರಿ ಜಾಸ್ತಿ ತಿನ್ನಿ.

ಜಾಸ್ತಿ ಪ್ರೋಟೀನ್‌ ತಿನ್ನಿ, ಬೇಗ ಹಸಿವಾಗೋದಿಲ್ಲ. ಆಗ ಕ್ಯಾಲೋರಿ ತುಂಬಿಸಿಕೊಳ್ಳೋದು ಕಡಿಮೆಯಾಗುತ್ತದೆ. ತೂಕ ಅದಾಗೇ ಕಡಿಮೆ ಆಗುತ್ತದೆ.

ನೀರು ಕುಡಿಯಿರಿ, ಸದಾ ಹೈಡ್ರೇಟ್‌ ಆಗಿರಿ. ಕೆಲವೊಮ್ಮೆ ಬಾಯಾರಿಕೆ ಕೂಡ ಹಸಿವಾಗ್ತಿದೆ ಅನ್ನೋ ಫೀಲಿಂಗ್‌ ತರಿಸುತ್ತದೆ.

ಸೋಶಿಯಲ್‌ ಮೀಡಿಯಾ ಅನ್‌ಇನ್ಸ್ಟಾಲ್‌ ಮಾಡಿ. ಇದರಲ್ಲಿ ಬರೋ ತೂಕ ಇಳಿಕೆಯ ನೂರು ವಿಡಿಯೋ ನೋಡಿ ತಲೆ ಕೆಡಿಸಿಕೊಳ್ತೀರಿ. ಇನ್ಯಾವುದೋ ದುಡ್ಡು ಮಾಡುವ ಜನರಿಗೆ ಹಣ ಕೊಡ್ತೀರಿ.

ವಾರಕ್ಕೆ ನಾಲ್ಕು ದಿನವಾದ್ರೂ ವ್ಯಾಯಮ, ಜಿಮ್‌, ಯೋಗ, ಡ್ಯಾನ್ಸ್‌ ಏನಾದರೂ ಮಾಡಿ. ವಾಕ್‌ ಮಾಡೋಕೆ ಮನೆಯಲ್ಲೇ ತ್ರೆಡ್‌ಮಿಲ್‌ ತಂದು ಇಟ್ಕೊಳಿ

error: Content is protected !!