ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಆಟೋಗಳು ಸೇಫ್ ಇಲ್ಲ ಅನ್ನೋ ಮಾತಿದೆ. ಹೆಣ್ಣುಮಕ್ಕಳು ಅದ್ಯಾವ ಧೈರ್ಯದಲ್ಲಿ ಆಟೋದಲ್ಲಿ ಓಡಾಡ್ತಾರೋ ಎಂದು ಹೇಳ್ತಾರೆ. ಆದರೆ ನಮ್ಮ ಬೆಂಗಳೂರಿನ ಆಟೋಗಳು ಎಲ್ಲರೂ ಹೇಳುವಷ್ಟು ಕೆಟ್ಟದೇನಿಲ್ಲ.
ಬೆಂಗಳೂರಿನ ಈ ಆಟೋ ಒಂದರಲ್ಲಿ ಡ್ರೈವರ್ ಬರೆದ ಸಾಲೊಂದು ಮಹಿಳೆಯ ಮನಸ್ಸನ್ನು ಗೆದ್ದಿದೆ. ಆಟೋದಲ್ಲಿ ಕೂತು ಧೈರ್ಯದಿಂದ ಆಕೆ ನಾನು ಸೇಫಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಲಿಟಲ್ ಬೆಂಗಳೂರು ಸ್ಟೋರೀಸ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬೆಂಗಳೂರಿನಲ್ಲಿ ರಾತ್ರಿಯ ವೇಳೆ ಆಟೋದಲ್ಲಿ ತೆರಳಿದ್ದು ಈ ವೇಳೆ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಮಹಿಳೆಯೂ ಆಟೋದ ಒಳಗೆ ಬರೆದ ಸಾಲುಗಳನ್ನು ತೋರಿಸಿದ್ದಾರೆ. ನಾನೂ ಒಬ್ಬ ತಂದೆ, ಅಣ್ಣ ನಿಮ್ಮ ಸುರಕ್ಷತೆ ನನಗೆ ಮುಖ್ಯ. ಆರಾಮಾಗಿ ಕುಳಿತುಕೊಳ್ಳಿ” ಎಂದು ಬರೆದಿರುವುದನ್ನು ಕಂಡು ಖುಷಿ ಪಟ್ಟಿದ್ದಾರೆ. ಆ ಬಳಿಕ ಈ ಮಹಿಳೆ ನಾನು ರಾಪಿಡೋ ಆಟೋದಲ್ಲಿ ಪ್ರಯಾಣಿಸುತ್ತಿದ್ದೆ. ಬೆಂಗಳೂರಿನಲ್ಲಿ ರಾತ್ರಿ 12 ಗಂಟೆಯಾಗಿತ್ತು. ಆಗ ನಾನು ಇದನ್ನ ಓದಿದೆ. ನಿಜಕ್ಕೂ ನನಗೆ ಸುರಕ್ಷತಾ ಮನೋಭಾವ ಮೂಡಿತು ಎಂದು ಮಹಿಳೆ ಹೇಳಿಕೊಂಡಿದ್ದಾರೆ.
VIRAL | ಬೆಂಗಳೂರಿನ ಆಟೋಗಳು ಹೆಣ್ಮಕ್ಕಳಿಗೆ ಸೇಫ್ ಅಲ್ವಾ? ಈ ಡ್ರೈವರ್ ಬರೆದ ಸಾಲನ್ನೊಮ್ಮೆ ಓದಿ

